Bengaluru, ಮೇ 2 -- ಅರ್ಥ: ಯಾರು ಭಕ್ತಿಸೇವೆಯ ಈ ಅಮೃತಮಾರ್ಗವನ್ನು ಹಿಡಿದು ಶ್ರದ್ದೆಯಿಂದ ನನ್ನನ್ನೇ ಪರಮ ಗುರಿಯನ್ನಾಗಿ ಮಾಡಿಕೊಳ್ಳುವರೋ ಅವರು ನನಗೆ ಬಹು ಬಹು ಪ್ರಿಯರು.

ಭಾವಾರ್ಥ: ಈ ಅಧ್ಯಾಯದಲ್ಲಿ ಎರಡನೆಯ ಶ್ಲೋಕದಿಂದ ಕಡೆಯವರೆಗೆ ಮಯ್ಯಾವೇಶ್ಯ ಮನೋ ಯೇ ಮಾಮ್ ("ನನ್ನಲ್ಲಿ ಮನಸ್ಸನ್ನು ಸ್ಥಿರಗೊಳಿಸಿ") ಎಂಬಲ್ಲಿಂದ ಯೇ ತು ಧರ್ಮಾಮೃತಮಿದಮ್ (ನಿತ್ಯ ನಿರತತೆಯ ಈ ಧರ್ಮ) ವರೆಗೆ ಪರಮ ಪ್ರಭುವು ಆತನ ಬಳಿಸಾರಲು ಬೇಕಾದ ಅಲೌಕಿಕ ಸೇವೆಯ ಪ್ರಕ್ರಿಯೆಯನ್ನು ವಿವರಿಸಿದ್ದಾನೆ. ಇಂತಹ ಪ್ರಕ್ರಿಯೆಗಳು ಪ್ರಭುವಿಗೆ ಬಹು ಪ್ರಿಯವಾದವು. ಅವುಗಳಲ್ಲಿ ನಿರತರಾದವರನ್ನು ಅವನು ಸ್ವೀಕರಿಸುತ್ತಾನೆ. ನಿರಾಕಾರ ಬ್ರಹ್ಮನ ಮಾರ್ಗದಲ್ಲಿ ನಿರತನಾದವನು, ದೇವೋತ್ತಮ ಪರಮ ಪುರುಷನ ವೈಯಕ್ತಿಕ ಸೇವೆಯಲ್ಲಿ ನಿರತನಾದವನು ಇವರಿಬ್ಬರಲ್ಲಿ ಯಾರು ಉತ್ತಮ ಎನ್ನುವ ಪ್ರಶ್ನೆಯನ್ನು ಅರ್ಜುನನು ಎತ್ತಿದ; ಪ್ರಭುವು ಅವನಿಗೆ ಎಷ್ಟು ಸ್ಪಷ್ಟವಾಗಿ ಉತ್ತರಕೊಟ್ಟನೆಂದರೆ, ಆಧ್ಯಾತ್ಮಿಕ ಸಾಕ್ಷಾತ್ಕಾರಕ್ಕೆ ದೇವೋತ್ತಮ ಪರಮ ಪುರುಷನ ಭಕ್ತಿಸೇವೆಯೇ ಎಲ್ಲ ಪ್ರಕ್ರಿಯ...