ಭಾರತ, ಫೆಬ್ರವರಿ 28 -- ಇಂದು ರಾಷ್ಟ್ರೀಯ ವಿಜ್ಞಾನ ದಿನ ಪ್ರತಿ ವರ್ಷ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ಭಾರತೀಯ ಭೌತಶಾಸ್ತ್ರಜ್ಞ ಸಿ.ವಿ. ರಾಮನ್ 1928 ರಲ್ಲಿ ರಾಮನ್ ಪರಿಣಾಮದ ಆವಿಷ್ಕಾರದ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಏಷ್ಯಾದಲ್ಲೇ ವಿಜ್ಞಾನ ವಿಷಯದಲ್ಲಿ ಮೊದಲ ನೊಬೆಲ್ ಪ್ರಶಸ್ತಿ ಪಡೆದ ಕೀರ್ತಿ ಚಂದ್ರಶೇಖರ ವೆಂಕಟರಾಮನ್ ಅವರದ್ದು.

1986 ರಿಂದ, ಭಾರತವು ವೈಜ್ಞಾನಿಕ ಸಾಧನೆಗಳನ್ನು ಗುರುತಿಸಲು ಮತ್ತು ವಿಜ್ಞಾನದ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಿಕೊಂಡು ಬರುತ್ತಿದೆ. ದೇಶದ ಅಭಿವೃದ್ಧಿಗೆ ವಿಜ್ಞಾನಿಗಳು ನೀಡಿದ ಕೊಡುಗೆಗಳನ್ನು ಇಂದು ಸ್ಮರಿಸಲಾಗುತ್ತೆ. ಈ ಬಾರಿಯ ಅಂದರೆ 2025ರ ಧ್ಯೇಯವಾಕ್ಯವು ವಿಜ್ಞಾನದಲ್ಲಿ ಯುವ ಸಬಲೀಕರಣದ ಮೇಲೆ ಕೇಂದ್ರೀಕರಿಸುತ್ತದೆ. ಈ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ.

2025 ರ ರಾಷ್ಟ್ರೀಯ ವಿಜ್ಞಾನ ದಿನದ ಧ್ಯೇಯವಾಕ್ಯವೇನೆಂದರೆ, ವಿಕಸಿತ ಭಾರತಕ್ಕಾಗಿ ವಿಜ್ಞಾನ ಮತ್ತು ನಾವೀನ್ಯತೆಯಲ್ಲಿ ಜಾಗತಿಕ ನಾಯಕತ್ವಕ್ಕಾ...