ಭಾರತ, ಫೆಬ್ರವರಿ 16 -- ಹಿಂದೂ ಧರ್ಮದಲ್ಲಿ ಸಂಕಷ್ಠಿ ಚತುರ್ಥಿಗೆ ವಿಶೇಷ ಮಹತ್ವವಿದೆ. ಪ್ರತಿ ತಿಂಗಳು ಬರುವ ಸಂಕಷ್ಠಿ ದಿನ ಉಪವಾಸ ಮಾಡಿ ಗಣಪನನ್ನು ಒಲಿಸಿಕೊಳ್ಳಲು ಪೂಜಾ ವಿಧಿ ವಿಧಾನಗಳನ್ನು ಕೈಗೊಳ್ಳುತ್ತಾರೆ. ಈ ದಿನ ವಿಶೇಷ ಪೂಜೆ ಹಾಗೂ ಮಂತ್ರಗಳನ್ನು ಪಠಿಸುವ ಮೂಲಕ ಗಣಪತಿಯ ಕೃಪೆಗೆ ಪಾತ್ರರಾಗಬಹುದು ಎಂಬುದು ನಂಬಿಕೆ. ಇಂದು ದ್ವಿಜಪ್ರಿಯ ಸಂಕಷ್ಟಿ ಚತುರ್ಥಿ ಇದೆ.

ದೃಕ್ ಪಂಚಾಂಗದ ಪ್ರಕಾರ ಈ ವರ್ಷ ದ್ವಿಜಪ್ರಿಯ ಸಂಕಷ್ಟಿ ಚತುರ್ಥಿಯನ್ನು ಫೆಬ್ರವರಿ 16 ಅಂದರೆ ಇಂದು ಆಚರಿಸಲಾಗುತ್ತದೆ. ಈ ದಿನ ಗಣೇಶನನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜಿಸಲಾಗುತ್ತದೆ. ದ್ವಿಜಪ್ರಿಯ ಸಂಕಷ್ಟಿ ಚತುರ್ಥಿಯಂದು, ವಿವಾಹಿತ ಮಹಿಳೆಯರು ತಮ್ಮ ಮಕ್ಕಳಿಗೆ ದೀರ್ಘಾಯುಷ್ಯ ದೊರೆಯಲಿ ಮತ್ತು ಜೀವನುದುದ್ದಕ್ಕೂ ಅವರು ಸಂತೋಷವಾಗಿರಲಿ ಎಂದು ಉಪವಾಸ ಮಾಡುತ್ತಾರೆ.

ಸಂಕಷ್ಟಿ ಚತುರ್ಥಿಯ ದಿನದಂದು ಉಪವಾಸ ಮಾಡುವುದರಿಂದ ಎಲ್ಲಾ ಕಷ್ಟಗಳು ದೂರವಾಗುತ್ತವೆ ಮತ್ತು ಗಣೇಶನ ಆಶೀರ್ವಾದವು ನಮ್ಮ ಮೇಲೆ ಇರುತ್ತದೆ ಎಂಬುದು ಧಾರ್ಮಿಕ ನಂಬಿಕೆಯಾಗಿದೆ. ದ್ವಿಜ...