ಭಾರತ, ಮಾರ್ಚ್ 14 -- ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡ ಬಳ್ಳಾಪುರ ತಾಲೂಕಿನ ತೊಬಗೆರೆಯಲ್ಲಿರುವ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿಂದು (ಮಾರ್ಚ್ 14, ಶುಕ್ರವಾರ) ಬ್ರಹ್ಮ ರಥೋತ್ಸವ ಅದ್ಧೂರಿಯಾಗಿ ನಡೆಯಲಿದ್ದು, ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ ಭಕ್ತರು ದೇವಾಲಯದತ್ತ ಆಗಮಿಸುತ್ತಿದ್ದು, ಬ್ರಹ್ಮ ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.

ಶ್ರೀ ಕ್ರೋಧಿನಾಮ ಸಂವತ್ಸರ ಫಾಲ್ಗುಣ ಶುದ್ಧ ಪೌರ್ಣಮಿ ದಿನವಾದ ಇಂದು (ಮಾರ್ಚ್ 14, ಶುಕ್ರವಾರ) ಮಧ್ಯಾಹ್ನ 12.12 ರಿಂದ 1 ಗಂಟೆಯೊಳಗೆ ಸಲ್ಲುವ ಶುಭ ಅಭಿಜನ್ ಲಗ್ನದಲ್ಲಿ ಬ್ರಹ್ಮ ರಥೋತ್ಸವ ನಡೆಯಲಿದೆ. ಬೆಳಿಗ್ಗೆ ದೇವರಿಗೆ ಅಭಿಷೇಕ ಮುಗಿದಿವೆ. ಮಧ್ಯಾಹ್ನ 12 ಗಂಟೆಗೆ ಮಂಟಪ ಪೂಜೆ ಜೊತೆಗೆ ಹೂವಿನ ಅಲಂಕಾರ ನಡೆಯುತ್ತದೆ. ರಥೋತ್ಸವದ ಬಳಿಕ ಅಂದರೆ ಸಂಜೆ 6 ಗಂಟೆಗೆ ಊರಿನ ಪ್ರಮುಖ ಬೀದಿಗಳಲ್ಲಿ ಸೂರ್ಯಮಂಡೋತ್ಸವ ನಡೆಯಲಿದೆ. ನವಿಲುವಾಹನ ಸಿಡಿಮದ್ದು, ಕೀಲು ಕುದುರೆ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯುತ್ತವೆ....