ಭಾರತ, ಮಾರ್ಚ್ 22 -- IPL 2025 Full Schedule: ಇಂದಿನಿಂದ (ಮಾರ್ಚ್‌ 22, ಶನಿವಾರ) ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ ಐಪಿಎಲ್‌ ಕಲರವ ಶುರು. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡಗಳು ಕೋಲ್ಕತ್ತದ ಈಡನ್‌ಗಾರ್ಡನ್ಸ್‌ ಮೈದಾನದಲ್ಲಿ ಮುಖಾಮುಖಿಯಾಗಲಿವೆ. ಇಂದು ರಾತ್ರಿ 7.30ಕ್ಕೆ ಪಂದ್ಯ ನಡೆಯಲಿದ್ದು. ಅದಕ್ಕೂ ಮುನ್ನ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಸ್ಟಾರ್‌ ಸೆಲಿಬ್ರಿಟಿಗಳು ಐಪಿಎಲ್‌ ಉದ್ಘಾಟನೆಗೆ ಮೆರುಗು ತುಂಬಲಿದ್ದಾರೆ.

ಐಪಿಎಲ್‌ 2025ರ ಸೀಸನ್‌ ಟೂರ್ನಿಯ 18ನೇ ಆವೃತ್ತಿಯಾಗಿದ್ದು ಮಾರ್ಚ್ 22ರಿಂದ ಶುರುವಾಗಿ ಮೇ 25ರವರೆಗೆ ನಡೆಯಲಿದೆ. ಒಟ್ಟು 13 ಕ್ರೀಡಾಂಗಣಗಳಲ್ಲಿ 74 ಪಂದ್ಯಗಳು ಇರಲಿವೆ. ಲೀಗ್ ಹಂತದ ಬಳಿಕ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕು ಸ್ಥಾನ ಪಡೆದ ತಂಡಗಳು ಮುಂದಿನ ಪ್ಲೇ ಆಫ್ ಹಂತಕ್ಕೆ ಲಗ್ಗೆ ಇಡಲಿವೆ. ಮೇ 25ಕ್ಕೆ ಅದ್ಧೂರಿ ಫೈನಲ್ ಪಂದ್ಯ ನಡೆಯಲಿದೆ. ಟೂರ್ನಿ ಇಂದು ಆರಂಭವಾಗುತ್ತಿದ್ದು, ...