Bangalore, ಮಾರ್ಚ್ 31 -- ಬೆಂಗಳೂರು: ಏಪ್ರಿಲ್‌ 1 ರಿಂದ ಹಾಲು, ನೀರು, ವಿದ್ಯುತ್‌ ದರ ಮಾತ್ರವಲ್ಲ, ಟೋಲ್‌ ದರವೂ ಹೆಚ್ಚಾಗಿದೆ. ಕೆಲವು ರಾಜ್ಯ ಸರ್ಕಾರದ ಕೊಡುಗೆಯಾಗಿದ್ದರೆ ಕೆಲವು ಕೇಂದ್ರ ಸರ್ಕಾರ ಕೊಟ್ಟ ಏಪ್ರಿಲ್‌ ಫೂಲ್‌ ಉಡುಗೊರೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಇಡೀ ರಾಜ್ಯಾದ್ಯಂತ ಟೋಲ್‌ ದರ ಹೆಚ್ಚಳಕ್ಕೆ ಸಿದ್ದತೆ ಮಾಡಿಕೊಂಡಿದ್ದು, ಶೇ.3-5 ರಷ್ಟು ಹೆಚ್ಚಳವಾಗಲಿದೆ. ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ವೇ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಸೆಟಲೈಟ್‌ ಟೌನ್‌ ರಿಂಗ್ ರೋಡ್‌ (ಎಸ್‌ಟಿಆರ್‌ಆರ್)‌ ಟೋಲ್‌ ಹೆಚ್ಚಳವಾಗಲಿದೆ ಎಂದು ತಿಳಿದು ಬಂದಿದೆ. ಹೆಚ್ಚುತ್ತಿರುವ ಹೆದ್ದಾರಿ ನಿರ್ವಹಣಾ ದರ ಮತ್ತು ಹಣದುಬ್ಬರದ ಹಿನ್ನೆಲೆಯಲ್ಲಿ ಸಗಟು ದರ ಸೂಚ್ಯಂಕದ ಆಧಾರದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಟೋಲ್‌ ದರಗಳು ಹೆಚ್ಚಾಗುತ್ತಿವೆ ಎಂದು ಪ್ರಾಧಿಕಾರ ತಿಳಿಸಿದೆ.

ಬೆಂಗಳೂರು- ಮೈಸೂರು ರಸ್ತೆ: ಬೆಂಗಳೂರು ಮೈಸೂರು ಹೆದ್ದಾರಿ ಬಳಕೆದಾರರು ಹೆಚ್ಚಿನ ಟೋಲ್‌ ಭರಿಸಬೇಕಾಗಿದೆ. ಕ...