ಭಾರತ, ಮಾರ್ಚ್ 9 -- ಫೆಬ್ರವರಿ 19ರಂದು ಅದ್ಭೂರಿ ಆರಂಭ ಪಡೆದ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ (ICC Champions Trophy 2025) ಇಂದು (ಮಾ 9) ತೆರೆ ಬೀಳಲಿದೆ. ಭಾರತ ತಂಡ ಮತ್ತು ನ್ಯೂಜಿಲೆಂಡ್ ನಡುವೆ ಫೈನಲ್ ಪಂದ್ಯ ನಡೆಯಲಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನವು ಈ ಹೈವೋಲ್ಟೇಜ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಟೂರ್ನಿಯಲ್ಲಿ ಈವರೆಗು ಅಜೇಯವಾಗಿರುವ ಭಾರತ ತಂಡವು, ತನ್ನ ವಿರುದ್ಧವೇ ಸೋತಿರುವ ನ್ಯೂಜಿಲೆಂಡ್ ಸವಾಲಿಗೆ ಭಾರೀ ಸಿದ್ಧತೆ ನಡೆಸಿದೆ. ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ ಗೆದ್ದಿವೆ. ಭಾರತ 2013ರ ನಂತರ ಪ್ರಶಸ್ತಿಗೆ ಮುತ್ತಿಕ್ಕಿ 25 ವರ್ಷಗಳ ಹಿಂದಿನ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಮತ್ತೊಂದೆಡೆ ಕಿವೀಸ್ 25 ವರ್ಷಗಳ ಹಿಂದಿನ ಫಲಿತಾಂಶ ಮರುಕಳಿಸಲು ಸಿದ್ಧತೆ ನಡೆಸಿದೆ. ಟೂರ್ನಿ ಆರಂಭಕ್ಕೂ ಮುನ್ನ ಟೂರ್ನಿ ಇತಿಹಾಸ, ವಿಜೇತರು, ರನ್ನರ್​ಅಪ್, ಟ್ರೋಫಿ ಗೆದ್ದ ನಾಯಕರ ಕುರಿತ ನೋಟ ಇಲ್ಲಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಗೊಂಡ...