ಭಾರತ, ಏಪ್ರಿಲ್ 15 -- ಬೆಂಗಳೂರು: ಇಂಡಿಯಾ ಜಸ್ಟಿಸ್ ರಿಪೋರ್ಟ್ 2025 ಇಂದು (ಏಪ್ರಿಲ್ 15) ಬಿಡುಗಡೆಯಾಗಿದ್ದು, ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆ ಸುಧಾರಣೆ ಸಂಬಂಧಿಸಿದಂತೆ 18 ದೊಡ್ಡ ರಾಜ್ಯಗಳ ಪೈಕಿ ಕರ್ನಾಟಕ ನಂಬರ್ 1 ಸ್ಥಾನದಲ್ಲಿದೆ. ಪೋಲಿಸ್ ಮತ್ತು ನ್ಯಾಯಾಂಗ ಎರಡರಲ್ಲೂ ಮೀಸಲು ಕೋಟಾ ಪೂರೈಸಿದ ರಾಜ್ಯವಾಗಿ ಕರ್ನಾಟಕ ಗಮನಸೆಳೆದಿದೆ. ಇನ್ನುಳಿದಂತೆ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡುಗಳು ನಂತರದ ಸ್ಥಾನದಲ್ಲಿವೆ. ಕರ್ನಾಟಕ ಕಳೆದ ಬಾರಿಯೂ ಒಟ್ಟಾರೆ ರ‍್ಯಾಂಕಿಂಗ್‌ನಲ್ಲಿ ನಂಬರ್ 1 ಸ್ಥಾನದಲ್ಲೇ ಇತ್ತು.

ಇಂಡಿಯಾ ಜಸ್ಟಿಸ್ ರಿಪೋರ್ಟ್ 2025ರ ಪ್ರಕಾರ, 18 ದೊಡ್ಡ ಮತ್ತು ಮಧ್ಯಮ ಗಾತ್ರದ ರಾಜ್ಯಗಳ ಪೈಕಿ(ತಲಾ ಒಂದು ಕೋಟಿಗಿಂತ ಹೆಚ್ಚಿನ ಜನಸಂಖ್ಯೆಯೊಂದಿಗೆ) ಕರ್ನಾಟಕಕ್ಕೆ 1ನೆ ಶ್ರೇಯಾಂಕ ನೀಡಿದ್ದು, ಕರ್ನಾಟಕವು ಹಿಂದಿನ ಆವೃತ್ತಿಯಿಂದ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಕಾನೂನು ನೆರವಿನಲ್ಲೂ ನಮ್ಮ ರಾಜ್ಯಕ್ಕೆ 1ನೇ ಶ್ರೇಯಾಂಕ ದೊರಕಿದ್ದು (2022ರಲ್ಲಿದ್ದ 2ನೆ ಸ್ಥಾನದಿಂದ ಬಡ್ತಿ) ಸೆರೆಮನೆಗಳ ಸುಧಾರ...