ಭಾರತ, ಮಾರ್ಚ್ 29 -- ಇಂಡಿಯನ್ ಸೂಪರ್ ಲೀಗ್ (ISL 2024-25) ಫುಟ್ಬಾಲ್ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ (Bengaluru FC) ತಂಡವು ಸೆಮಿಫೈನಲ್‌ಗೆ ಪ್ರವೇಶಿಸಿದೆ. ಮುಂಬೈ ಸಿಟಿ ಎಫ್‌ಸಿ ವಿರುದ್ಧದ ನಾಕೌಟ್ ಹಂತದ ಪಂದ್ಯದಲ್ಲಿ ಗೋಲುಗಳ ಸುರಿಮಳೆ ಹರಿಸಿದ ಸುನಿಲ್ ಛೆಟ್ರಿ ನೇತೃತ್ವದ ಬೆಂಗಳೂರು ತಂಡವು, 5-0 ಗೋಲುಗಳಿಂದ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ ಸೆಮಿಫೈನಲ್ ಸ್ಥಾನ ಭದ್ರಪಡಿಸಿದೆ.
ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರೋಚಕ ಕದನದಲ್ಲಿ, ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಬೆಂಗಳೂರು ಎಫ್‌ಸಿ ಅಬ್ಬರಿಸಿತು. ಮೊದಲಾರ್ಧದಲ್ಲಿ ಎರಡು ಗೋಲುಗಳನ್ನು ಗಳಿಸಿ ಆರಂಭದಲ್ಲೇ ಅಬ್ಬರಿಸಿದ ತಂಡವು, ಎದುರಾಳಿ ಮುಂಬೈ ತಂಡಕ್ಕೆ ಗೋಲು ಗಳಿಸುವ ಅವಕಾಶವೇ ನೀಡಲಿಲ್ಲ. ದ್ವಿತಿಯಾರ್ಧದಲ್ಲಿ ಮತ್ತೆ ಅಬ್ಬರ ಮುಂದುವರೆಸಿದ ತಂಡ, ಮೂರು ಗೋಲುಗಳೊಂದಿಗೆ ಸಂಪೂರ್ಣ ಪ್ರಾಬಲ್ಯ ಸಾಧಿಸಿತು.
ಪಂದ್ಯ ಆರಂಭವಾದ 9ನೇ ನಿಮಿಷದಲ್ಲಿ ಸುರೇಶ್ ವಾಂಗ್ಜಾಮ್ ಗೋಲು ಗಳಿಸುವ ಮೂಲಕ ತಂಡಕ್ಕೆ ಮೊದಲ ಮುನ್ನಡೆ ಸಿಕ್ಕಿತು. ಎರಡನೆಯವ...
Click here to read full article from source
To read the full article or to get the complete feed from this publication, please
Contact Us.