ಭಾರತ, ಫೆಬ್ರವರಿ 4 -- ಟೀಮ್ ಇಂಡಿಯಾ ವೇಗದ ಬೌಲರ್​ ಜಸ್ಪ್ರೀತ್ ಬುಮ್ರಾ ಫಿಟ್ನೆಸ್ ಮತ್ತೆ ಮುನ್ನೆಲೆಗೆ ಬಂದಿದೆ. ಫೆಬ್ರವರಿ ಆರಂಭ ಅಂದರೆ ಫೆ 6ರಿಂದ ಆರಂಭವಾಗುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಆರಂಭದೊಳಗೆ ವೇಗಿಯ ಫಿಟ್ನೆಸ್ ಅಪ್ಡೇಟ್ ಹೊರಬರುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದ್ದವು. ಹೀಗಾಗಿ ಚೇತರಿಕೆ ಕಂಡಿದ್ದರೆ ಅವರನ್ನು ಏಕದಿನ ಸರಣಿಗೆ ಆಯ್ಕೆ ಮಾಡಲಾಗುತ್ತದೆ ಎಂದೂ ಹೇಳಲಾಗಿತ್ತು. ಆದರೀಗ ಪರಿಷ್ಕೃತ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ಮಿಸ್ಟ್ರಿ ಸ್ಪಿನ್ನರ್​ ವರುಣ್ ಚಕ್ರವರ್ತಿ ಸೇರ್ಪಡೆಯಾಗಿದ್ದರೆ, ಬುಮ್ರಾ ಅವಕಾಶ ಪಡೆದಿಲ್ಲ. ಬುಮ್ರಾ ಇನ್ನೂ ಫಿಟ್ ಆಗದೇ ಇರುವುದು ಬಿಸಿಸಿಐ ಮತ್ತು ಟೀಮ್ ಮ್ಯಾನೇಜ್​ಮೆಂಟ್ ಚಿಂತೆಗೆ ಕಾರಣವಾಗಿದೆ.

ಫೆಬ್ರವರಿ 19ರಿಂದ ಶುರುವಾಗುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡಕ್ಕೆ ಜಸ್ಪೀತ್ ಬುಮ್ರಾ ಅಗತ್ಯ ತುಂಬಾ ಇದೆ. ಇಂತಹ ಪರಿಸ್ಥಿತಿಯಲ್ಲಿ ಚೇತರಿಸಿಕೊಳ್ಳದ ಕಾರಣ ಫಿಟ್​ನೆಸ್ ಸಮಸ್ಯೆ ಬಿಗಡಾಯಿಸಿದೆ ಎಂದು ವರದಿಯಾಗಿದೆ. ಹೀಗಿದ್ದಾಗ ಚಾಂಪಿಯನ್ಸ್ ಟ್ರೋಫಿಗೆ ತಂ...