ಭಾರತ, ಏಪ್ರಿಲ್ 28 -- 18ನೇ ಆವೃತ್ತಿಯ ಐಪಿಎಲ್ ಮುಗಿದ ನಂತರ ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಜೂನ್ 20ರಿಂದ ನಡೆಯಲಿರುವ ಐದು ಪಂದ್ಯಗಳ ಇಂಗ್ಲೆಂಡ್​ ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮುಂದಿನ ತಿಂಗಳು ಅಂದರೆ ಮೇ 2ನೇ ವಾರದಲ್ಲಿ ಭಾರತ ಮತ್ತು ಭಾರತ ಎ ತಂಡಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ. ಆದರೆ​ ಮಧ್ಯಮ ಕ್ರಮಾಂಕದ ಎರಡು ಸ್ಥಾನಗಳಿಗೆ ಕನಿಷ್ಠ 6 ಸ್ಪರ್ಧಿಗಳ ನಡುವೆ ಪೈಪೋಟಿ ನಡೆಯುತ್ತಿದೆ.

ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಬಿಸಿಸಿಐ 17 ಸದಸ್ಯರ ತಂಡ ಕಳುಹಿಸಿತ್ತು. ಆದರೆ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳಿಗೆ ಅಂತಿಮ ತಂಡದಲ್ಲಿ 15 ಅಥವಾ 16 ಆಟಗಾರರು ಅವಕಾಶ ಪಡೆಯುವ ಸಾಧ್ಯತೆಯಿದೆ. ಈ ಪ್ರವಾಸದ ಸಮಯದಲ್ಲಿ ಭಾರತದ ಎ ತಂಡವೂ ಇಂಗ್ಲೆಂಡ್​ನಲ್ಲಿ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮುಖ್ಯ ತಂಡದ ಅಗತ್ಯಕ್ಕೆ ಅನುಗುಣವಾಗಿ ಎ ತಂಡದಲ್ಲಿರುವ ಆಟಗಾರನನ್ನು ಆಯ್ಕೆ ಮಾಡಬಹುದು.

ನಾಯಕ ರೋಹಿತ್ ಶರ್ಮಾ,...