ಭಾರತ, ಏಪ್ರಿಲ್ 27 -- 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ ಮಧ್ಯೆಯೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಭವಿಷ್ಯದ ಕುರಿತು ಚರ್ಚೆಗಳು ನಡೆಯುತ್ತಿವೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪ್ರಕಟಿಸಿದ ಆಟಗಾರರ ವಾರ್ಷಿಕ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ರೋಹಿತ್​​ಗೆ ಅವಕಾಶ ನೀಡುವ ಮೂಲಕ ಅವರ ಭವಿಷ್ಯದ ಕುರಿತು ಯಾವುದೇ ಆತಂಕ ಇಲ್ಲ ಎನ್ನುವ ಸುಳಿವು ನೀಡಿದೆ. ಹೀಗಿದ್ದರೂ ಚರ್ಚೆಗಳು ಮಾತ್ರ ನಿಂತಿಲ್ಲ. ಆದರೆ ಇಂಗ್ಲೆಂಡ್​​ ಸರಣಿಗೆ ರೋಹಿತ್​ ಆಯ್ಕೆಯಾಗುವುದರ ಜೊತೆಗೆ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ ಎನ್ನುತ್ತಿವೆ ಉನ್ನತ ಮೂಲಗಳು.

ಜೂನ್ 20 ರಿಂದ ಶುರುವಾಗುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್​ ಸರಣಿಗೆ ಮೇ 2ನೇ ವಾರದಲ್ಲಿ ಭಾರತ ತಂಡ ಪ್ರಕಟವಾಗಬಹುದು. ತಂಡದ ಆಯ್ಕೆಗೆ ಕೆಲವು ವಾರಗಳ ಮೊದಲು ರೋಹಿತ್ ಶರ್ಮಾ ಬಗ್ಗೆ ಪಿಟಿಐ ದೊಡ್ಡ ಅಪ್​ಡೇಟ್ ನೀಡಿದೆ. ವರದಿಯ ಪ್ರಕಾರ, ರೋಹಿತ್ ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವುದು ಖಚಿತ. ಅವರು ತಂಡವನ್ನು ಮುನ್ನಡೆಸುವುದೂ ಖಚಿತ ಎಂದು ಈ ವರದಿ ತಿಳ...