ಭಾರತ, ಜುಲೈ 29 -- ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯವು ಡ್ರಾದಲ್ಲಿ ಅಂತ್ಯವಾಯ್ತು. ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಅವರ ಅಮೋಘ ಶತಕದ ನೆರವಿಂದ ಪಂದ್ಯದಲ್ಲಿ ಭಾರತವು ಸೋಲಿನ ಭೀತಿಯಿಂದ ಹೊರಬಂತು. ಆದರೆ, ಮ್ಯಾಂಚೆಸ್ಟರ್‌ನಲ್ಲಿ ಪಂದ್ಯ ಡ್ರಾ ಮಾಡುವುದಕ್ಕೂ ಮುನ್ನ ಉಭಯ ತಂಡಗಳ ನಡುವೆ ನಡೆದ ನಾಟಕೀಯ ಬೆಳವಣಿಗೆಗಳು ಚರ್ಚೆಯ ವಿಷಯವಾಗಿದೆ. ಇದೀಗ ಸರಣಿಯು 2-1 ಅಂತರದಿಂದ ಇಂಗ್ಲೆಂಡ್ ಪರವಾಗಿದೆ. ಮುಂದಿನ ಪಂದ್ಯದಲ್ಲಿ ಭಾರತ ಗೆದ್ದರೆ, 2-2 ಅಂತರದಿಂದ ಸರಣಿ ಸಮಬಲಗೊಳಿಸುವ ಅವಕಾಶವಿದೆ.
ನಾಲ್ಕನೇ ಟೆಸ್ಟ್ ಪಂದ್ಯದ ಪಂದ್ಯದ ಬಹುಪಾಲು ಭಾಗವನ್ನು ಇಂಗ್ಲೆಂಡ್ ನಿಯಂತ್ರಿಸಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತವು 358 ರನ್‌ಗಳಿಗೆ ಆಲೌಟ್ ಆದ ನಂತರ, ಬೆನ್ ಸ್ಟೋಕ್ಸ್ ಮತ್ತು ಜೋ ರೂಟ್ ಅವರ ಶತಕಗಳ ನೆರವಿನಿಂದ ಇಂಗ್ಲೆಂಡ್ 669 ರನ್ ಗಳಿತು. ಅಲ್ಲದೆ 311 ರನ್‌ಗಳ ಭಾರಿ ಮುನ್ನಡೆ ಸಾಧಿಸಿತು. ಪಂದ್ಯದ ಫಲಿತಾಂಶವನ್ನು ಪರಿಗಣಿಸಿದರೆ, ಸುದೀರ್ಘ ಕಾಲ ಬ್ಯಾಟಿಂಗ್ ಮಾಡುವ ಇಂಗ್ಲೆಂಡ್ ...
Click here to read full article from source
To read the full article or to get the complete feed from this publication, please
Contact Us.