ಭಾರತ, ಮಾರ್ಚ್ 19 -- ಇಂಗ್ಲೆಂಡ್‌ನಲ್ಲಿ ಈ ಬಾರಿಯ ಕಬಡ್ಡಿ ವಿಶ್ವಕಪ್ ನಡೆಯುತ್ತಿದೆ. ವಿಶ್ವ ಕಬಡ್ಡಿ (World Kabaddi) ಆಯೋಜಿಸುತ್ತಿರುವ ಈ ಕ್ರೀಡಾಕೂಟವು, ಜಾಗತಿಕ ಟೂರ್ನಿಯ ಎರಡನೇ ಆವೃತ್ತಿಯಾಗಿದೆ. ಟೂರ್ನಿಯು ಈಗಾಗಲೇ ಮಾರ್ಚ್ 17ರಂದು ಆರಂಭವಾಗಿದ್ದು, ಚುಟುಕು ಟೂರ್ನಿ ಮಾರ್ಚ್ 23ರಂದು ಮುಕ್ತಾಯಗೊಳ್ಳಲಿದೆ. ಇದು ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಷನ್‌ ನಡೆಸುವ ಟೂರ್ನಿ ಅಲ್ಲ. ಹೀಗಾಗಿ ಚುಟುಕಾಗಿ ಕೊನೆಗೊಳ್ಳಲಿದೆ. ಪುರುಷರ ವಿಭಾಗದಲ್ಲಿ ಒಟ್ಟು ಹತ್ತು ತಂಡಗಳು ಮಾತ್ರವೇ ಭಾಗವಹಿಸುತ್ತಿದ್ದು, ಎರಡು ಗುಂಪುಗಳಾಗಿ ವಿಂಗಡಿಸಲ್ಪಟ್ಟು ಸ್ಪರ್ಧಿಸಲಿವೆ. ವನಿತೆಯರ ವಿಭಾಗದಲ್ಲಿ 6 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ.

ಪುರುಷರ ವಿಭಾಗದಲ್ಲಿ, ಎ ಗುಂಪಿನಲ್ಲಿ ಆತಿಥೇಯ ಇಂಗ್ಲೆಂಡ್, ಜರ್ಮನಿ, ಹಂಗೇರಿ, ಪೋಲೆಂಡ್ ಮತ್ತು ಯುಎಸ್ಎ ತಂಡಗಳಿವೆ. ಮತ್ತೊಂದೆಡೆ, ಬಿ ಗುಂಪಿನಲ್ಲಿ ಹಾಲಿ ಚಾಂಪಿಯನ್ ಭಾರತ, ಇಟಲಿ, ಹಾಂಗ್ ಕಾಂಗ್ ಚೀನಾ, ಸ್ಕಾಟ್ಲೆಂಡ್ ಮತ್ತು ವೇಲ್ಸ್ ತಂಡಗಳಿವೆ. ಪ್ರತಿ ತಂಡಗಳು ತಮ್ಮ ಗುಂಪಿನ ಎದುರಾಳಿಗಳೊ...