ಭಾರತ, ಫೆಬ್ರವರಿ 22 -- ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡ ಭರ್ಜರಿ ಶುಭಾರಂಭ ಮಾಡಿದೆ. ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ ಕಾಂಗರೂಗಳು ಬೃಹತ್‌ ಮೊತ್ತವನ್ನು ಯಶಸ್ವಿಯಾಗಿ ಚೇಸ್‌ ಮಾಡಿದ್ದಾರೆ. ಜೋಶ್‌ ಇಂಗ್ಲಿಸ್‌ ಸ್ಫೋಟಕ ಶತಕ ಹಾಗೂ ಮ್ಯಥ್ಯೂ ಶಾರ್ಟ್‌, ಅಲೆಕ್ಸ್‌ ಕ್ಯಾರಿ ಸಮಯೋಚಿತ ಆಟದ ನೆರವಿಂದ ಆಸೀಸ್‌ ದಾಂಡಿಗರಿಗೆ 5 ವಿಕೆಟ್‌ಗಳ ಗೆಲುವು ಒಲಿದಿದೆ. ಅಬ್ಬರದ ಬ್ಯಾಟಿಂಗ್‌ ನಡೆಸಿ ದೊಡ್ಡ ಮೊತ್ತ ಕಲೆ ಹಾಕಿದ ಹೊರತಾಗಿಯೂ, ಇಂಗ್ಲೆಂಡ್‌ ತಂಡದ ಸೋಲಿನ ಸರಪಳಿ ಕಳಚಿಲ್ಲ. ಭಾರತ ವಿರುದ್ಧ ಮೂರು ಪಂದ್ಯಗಳ ಸರಣಿ ಸೋತ ಬೆನ್ನಲ್ಲೇ, ಇದೀಗ ಚಾಂಪಿಯನ್ಸ್‌ ಟ್ರೋಫಿಯಲ್ಲಿಯೂ ಆಂಗ್ಲರು ಸೋಲಿನ ಆರಂಭ ಪಡೆದಿದ್ದಾರೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್, ಬೆನ್ ಡಕೆಟ್‌ ದಾಖಲೆಯ ಶತಕದ (143 ಎಸೆತಗಳಲ್ಲಿ 165 ರನ್) ನೆರವಿಂದ 8 ವಿಕೆಟ್‌ ಕಳೆದುಕೊಂಡು 351 ರನ್‌ ಕಲೆ ಹಾಕಿತು. ಇದಕ್ಕೆ ಪ್ರತಿಯಾಗಿ ಆಸೀಸ್‌ ತಂಡವು, ಆರಂಭಿಕ ಹೊಡೆತದ ಹೊರತಾಗಿಯೂ ಅಬ್ಬರಿಸಿ ಬೊಬ್ಬಿರ...