ಭಾರತ, ಫೆಬ್ರವರಿ 27 -- ಪಿಯುಸಿ ಪರೀಕ್ಷೆ ಆರಂಭಕ್ಕೆ ಒಂದು ವಾರವಷ್ಟೇ ಬಾಕಿ ಉಳಿದಿದೆ. 12ನೇ ತರಗತಿ ಪರೀಕ್ಷೆ ಮುಗಿದ ಬೆನ್ನಲ್ಲೇ ಎಸ್‌ಎಸ್‌ಎಸ್‌ಸಿ ಪರೀಕ್ಷೆ ಆರಂಭವಾಗಲಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಅಂತಿಮ ಸಿದ್ಧತೆಯಲ್ಲಿ ನಿರತರಾಗಿದ್ದಾರೆ. ಅದರಲ್ಲೂ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಿದ್ಧತೆಗೆ ಇನ್ನೂ ಒಂದು ತಿಂಗಳ ಸಮಯಾವಕಾಶವಿದೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ಭಯ ಬಿಟ್ಟು, ಇಂದಿನಿಂದ ಸಿದ್ಧತೆ ನಡೆಸಿದರೂ, ಉತ್ತಮ ಅಂಕಗಳನ್ನು ಕಲೆ ಹಾಕಬಹುದು. ಕೆಲವು ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷಾ ವಿಷಯ ಕಷ್ಟ ಎಂಬ ಅಭಿಪ್ರಾಯವಿರುತ್ತದೆ. ಅದರಲ್ಲೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಈ ಭೀತಿ ತುಸು ಹೆಚ್ಚು. ಆದರೆ, ಇಂಗ್ಲಿಷ್ ಭಾಷಾ ವಿಷಯ ಸುಲಭ. ಇದು ಹೆಚ್ಚು ಅಂಕಗಳನ್ನು ಗಳಿಸಬಹುದಾದ ವಿಷಯವೂ ಹೌದು.

10 ಮತ್ತು 12ನೇ ತರಗತಿಯ ಇಂಗ್ಲಿಷ್ ವಿಷಯ ಅಧ್ಯಯನಕ್ಕೆ ನಿಮಗೆ ಸಹಾಯವಾಗುವಂಥಾ ಸಲಹೆಗಳು ಇಲ್ಲಿವೆ.

ಪ್ರಬಂಧ ಬರವಣಿಗೆ ಹೆಚ್ಚು ಅಭ್ಯಾಸ ಮಾಡಿ. ಇದು ಅಂಕ ಗಳಿಕೆ ಜೊತೆಗೆ, ವೇಗದ ಬರವಣಿಗೆಗೆ ನೆ...