ಭಾರತ, ಫೆಬ್ರವರಿ 12 -- ರಾಜು ಜೇಮ್ಸ್ ಬಾಂಡ್ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗ್ರಹ ಸಚೀಪ ಜಿ ಪರಮೇಶ್ವರ್ ಅವರು ಸಿನಿಮಾಗಳ ಕುರಿತು ಮಾತನಾಡಿದ್ದಾರೆ. ಅದೇ ಸಂದರ್ಭದಲ್ಲಿ ಪರೋಕ್ಷವಾಗಿ ಭೀಮ ಸಿನಿಮಾದ ಬಗ್ಗೆಯೂ ಮಾತನಾಡಿದ್ದಾರೆ. ಸಿನಿಮಾದ ಬಗ್ಗೆ ಮಾತನಾಡುತ್ತಾ ಜಿ ಪರಮೇಶ್ವರ್ ಅವರು ಸಿನಿಮಾಗಳು ಸಮಾಜಕ್ಕೆ ಮಾದರಿ ಆಗುವ ರೀತಿಯಲ್ಲಿರಬೇಕು, ಹೊರತಾಗಿ ಸಿನಿಮಾದಿಂದ ತಪ್ಪುಗಳು ಹೆಚ್ಚಾಗಬಾರದು ಎಂದಿದ್ದಾರೆ. ಭೀಮ ಚಿತ್ರದಿಂದ ಡ್ರಗ್ಸ್ ತೆಗೆದುಕೊಳ್ಳುವವರು ಹೆಚ್ಚಾಗಿದ್ದಾರೆ ಎಂದು ಪರೋಕ್ಷವಾಗಿ ಸಚಿವ ಪರಮೇಶ್ವರ್ ಹೇಳಿದ್ದಾರೆ. ತುಂಬಾ ಜನಕ್ಕೆ ಮೆಡಿಕಲ್ ಶಾಪ್‌ನಲ್ಲಿ ಈ ತರಹ ಟ್ಯಾಬ್ಲೆಟ್ ಸಿಗುತ್ತೆ ಅಂತ ಗೊತ್ತಿರಲಿಲ್ಲ. ಈ ಚಿತ್ರದ ಮುಖೇನ ಅದು ಗೊತ್ತಾಗಿ ದುರ್ಬಳಕೆ ಆಗುತ್ತಿದೆ ಎಂದಿದ್ದಾರೆ.

ನಾವು ಡ್ರಗ್ಸ್ ವಿರುದ್ಧ ಯುದ್ದವನ್ನೇ ಮಾಡುತ್ತಿದ್ದೇವೆ. ಅಂತದ್ರಲ್ಲಿ ಸಿನಿಮಾ ನೋಡಿದ ನಂತರ ಉಲ್ಟಾ ಮೆಸೆಜ್ ಜನರಿಗೆ ತಲುಪಿದೆ. ಸಿನಿಮಾದಿಂದ ಈ ರೀತಿ ಪ್ರಭಾವ ಬೀರಬಾರದು. ಯಾವುದೇ ಸಿನಿಮಾ ಮಾಡಿದಾಗ ಅದರಿಂದ...