Bengaluru, ಏಪ್ರಿಲ್ 18 -- ಜೀ ಕನ್ನಡದಲ್ಲಿ ಪ್ರಸಾರವಾಗುವ ʻಶ್ರಾವಣಿ ಸುಬ್ರಮಣ್ಯʼ ಸೀರಿಯಲ್‌ ಇತ್ತೀಚಿನ ಕೆಲ ವಾರಗಳಿಂದ ಟಿಆರ್‌ಪಿ ವಿಚಾರದಲ್ಲಿ ನಂಬರ್‌ 1 ಸ್ಥಾನದಲ್ಲಿ ಇದೆ. ಇದೇ ಸೀರಿಯಲ್‌ ಮೂಲಕ ಕರುನಾಡಿಗೆ ಪರಿಚಿತರಾದವರು ನಟಿ ಆಸಿಯಾ ಫಿರ್ದೋಸ್‌. ಈಗ ಇದೇ ನಟಿ ತಮ್ಮ ಬಣ್ಣದ ಲೋಕದಲ್ಲಿನ ಕರಾಳ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಸಿನಿಮಾ ನಿರ್ಮಾಪಕ ಕೆಟ್ಟದಾಗಿ ನಡೆದುಕೊಂಡ ರೀತಿ ಬಗ್ಗೆ ಹೇಳಿಕೊಂಡಿದ್ದಾರೆ. ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವಂತೆ ಆಫೀಸ್‌ಗೆ ಕರೆದು, ನಿರ್ಮಾಪಕನೊಬ್ಬ ಆಡಿದ ಮಾತುಗಳನ್ನು ಮತ್ತೆ ನೆನಪಿಸಿಕೊಂಡಿದ್ದಾರೆ. ಹೀಗಿದೆ ಆಸಿಯಾ ಫಿರ್ದೋಸ್‌ ಕಾಸ್ಟಿಂಗ್‌ ಕೌಚ್‌ ಅನುಭವ.

"ಸೀರಿಯಲ್‌ ಮಾಡುತ್ತಿದ್ದೇನೆ. ಎರಡು ಸಿನಿಮಾಗಳಲ್ಲಿಯೂ ನಟಿಸಿದ್ದೇನೆ. ಇದಾದ ಮೇಲೆ ಒಬ್ಬ ನಿರ್ಮಾಪಕರಿಂದ ನನಗೆ ಕರೆ ಬಂತು. ಹೀಗೊಂದು ಸಿನಿಮಾ ಇದೆ. ಬಂದು ಭೇಟಿಯಾಗಿ ಅಂದ್ರು. ಅವರ ಆಫೀಸ್‌ ನಮ್ಮ ಮನೆ ಬಳಿಯೇ ಇದ್ದಿದ್ದರಿಂದ, ಅಮ್ಮನನ್ನು ಕರೆದುಕೊಂಡು ಹೋಗಲಿಲ್ಲ. ನಾನೊಬ್ಬಳೇ ಹೋದೆ. ಈ ಥರ ಒಂದು ಸಿನಿಮಾ ಮಾಡ್ತ...