ಭಾರತ, ಮಾರ್ಚ್ 3 -- Dr Rajkumar favorite Serial: ಕನ್ನಡ ಚಿತ್ರೋದ್ಯಮದಲ್ಲಿ ಇಂದಿಗೂ ಹೇಗೆ ಎವರ್‌ಗ್ರೀನ್‌ ಸಿನಿಮಾಗಳು ಇವೆಯೋ, ಅದೇ ರೀತಿ ಕನ್ನಡ ಕಿರುತೆರೆಯಲ್ಲಿಯೂ ಎವರ್‌ಗ್ರೀನ್‌ ಧಾರಾವಾಹಿಗಳಿವೆ. ದಶಕಗಳ ಹಿಂದೆ ಮನೆ ಮಂದಿಯನ್ನು ನಕ್ಕು ನಗಿಸಿದ ಸೀರಿಯಲ್‌ಗಳು ಇಂದಿಗೂ ಜನರ ಮನಸಲ್ಲಿ ಹಸಿರಾಗಿವೆ. ಕೋರ್ಟ್‌ ರೂಮ್‌ ಡ್ರಾಮಾ, ಕೌಟುಂಬಿಕ ಸೀರಿಯಲ್‌ಗಳೂ ವೀಕ್ಷಕರ ಮನ ಗೆದ್ದ ಉದಾಹರಣೆಗಳಿವೆ. ಹೀಗಿರುವಾಗ, ವರನಟ ಡಾ. ರಾಜ್‌ಕುಮಾರ್‌ ಸಿನಿಮಾಗಳಲ್ಲಿನ ನಟನೆಯಿಂದ ನಿವೃತ್ತಿ ಪಡೆದ ನಂತರ, ಆಗಾಗ ಒಂದಷ್ಟು ಸೀರಿಯಲ್‌ಗಳನ್ನೂ ನೋಡುತ್ತಿದ್ದರು. ಆ ಪೈಕಿ ಅವರ ಇಷ್ಟದ ಧಾರಾವಾಹಿ ಯಾವುದಿರಬಹುದು? ಇಲ್ಲಿದೆ ಉತ್ತರ.

ಆ ಸೀರಿಯಲ್‌ ಬೇರಾವುದೂ ಅಲ್ಲ, ಈ ಟಿವಿಯಲ್ಲಿ ಅಂದು ಪ್ರಸಾರವಾಗುತ್ತಿದ್ದ ಸಿಲ್ಲಿ ಲಲ್ಲಿ ಧಾರಾವಾಹಿ. ಹೌದು, ಡಾ ರಾಜ್‌ಕುಮಾರ್‌ ಅವರಿಗೆ ಸಿಲ್ಲಿ ಲಲ್ಲಿ ಸೀರಿಯಲ್‌ ಎಂದರೆ ಬಲು ಇಷ್ಟ. ಅದ್ಯಾವ ಮಟ್ಟಿಗೆ ಎಂದರೆ, ಆ ಧಾರಾವಾಹಿ ಸಲುವಾಗಿ ಅವರು ತಮ್ಮ ವಾಕಿಂಗ್‌ ಸಮಯವನ್ನೇ ಬದಲಿಸಿಕೊಂಡಿದ್ದರು. ಮನೆಯಲ್ಲಿನ ...