ಭಾರತ, ಏಪ್ರಿಲ್ 17 -- ಮೋಹಿತ್‌ ರೈನಾ ಹಾಗೂ ದಿಯಾ ಮಿರ್ಜಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 2019ರಲ್ಲಿ ಬಿಡುಗಡೆಯಾದ ವೆಬ್‌ಸರಣಿ ಕಾಫಿರ್ ಈಗ ಸಿನಿಮಾವಾಗಿದೆ. ಇದರಲ್ಲಿ ಅರಿಯದೇ ಎಲ್‌ಒಸಿ (ಗಡಿ ನಿಯಂತ್ರಣ ರೇಖೆ) ದಾಟಿ ಭಾರತಕ್ಕೆ ಬರುವ ಮುಗ್ಧ ಪಾಕಿಸ್ತಾನಿ ಮಹಿಳೆಯರ ಪಾತ್ರವನ್ನು ನಿರ್ವಹಿಸಿದ್ದಾರೆ ದಿಯಾ. ಇತ್ತೀಚಿನ ಸಂದರ್ಶನವೊಂದರಲ್ಲಿ ದಿಯಾ ಕಾಫಿರ್ ಚಿತ್ರೀಕರಣದ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರದ ಅತ್ಯಾಚಾರ ದೃಶ್ಯದ (ರೇಪ್ ಸೀನ್‌) ಚಿತ್ರೀಕರಣದ ಕ್ಷಣಗಳನ್ನು ನೆನಪಿಸಿಕೊಂಡಿರುವ ಅವರು ಇದು ನನಗೆ ಅತ್ಯಂತ ಕಷ್ಟಕರವಾಗಿತ್ತು ಎಂದಿದ್ದಾರೆ.

ನ್ಯೂಸ್‌ 18ಗೆ ನೀಡಿದ ಸಂದರ್ಶನದಲ್ಲಿ ಈ ವೆಬ್‌ಸರಣಿಗಾಗಿ ಚಿತ್ರೀಕರಿಸಲಾದ ಅತ್ಯಾಚಾರ ದೃಶ್ಯವು ದೈಹಿಕವಾಗಿ ಹಾಗೂ ಭಾವನಾತ್ಮಕವಾಗಿ ಅವರಿಗೆ ಎಷ್ಟು ಕಠಿಣವಾಗಿತ್ತು ಎಂಬುದನ್ನು ಅವರು ಹೇಳಿಕೊಂಡಿದ್ದಾರೆ.

ಅತ್ಯಾಚಾರ ದೃಶ್ಯದ ಚಿತ್ರೀಕರಣದ ಕ್ಷಣಗಳನ್ನು ನೆನಪಿಸಿಕೊಂಡಿರುವ ಅವರು 'ಅದು ನನಗೆ ತುಂಬಾ ಕಷ್ಟಕರವಾಗಿತ್ತು. ಆ ದೃಶ್ಯದ ಚಿತ್ರೀಕರಣ ಮುಗಿದ ನಂತರ ನಾನು ದೈಹಿಕವಾಗ...