Bengaluru, ಮಾರ್ಚ್ 20 -- V Manohar: ಪ್ರತಿಯೊಬ್ಬರಿಗೂ ತಮ್ಮ ಜೀವನದಲ್ಲಿ ಒಂದು ಟರ್ನಿಂಗ್‍ ಪಾಯಿಂಟ್‍ ಸಿಗುತ್ತದೆ. ಅದನ್ನು ಸರಿಯಾಗಿ ಬಳಸಿಕೊಂಡರೆ, ಆತ ತನ್ನ ಜೀವನದಲ್ಲಿ ಮತ್ತಷ್ಟು ಮೇಲೆ ಏರಬಹುದು. ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಮತ್ತು ಗೀತರಚನೆಕಾರ ವಿ. ಮನೋಹರ್ ಚಿತ್ರಜೀವನದಲ್ಲಿ ಒಂದಲ್ಲ ಎರಡು ಬಾರಿ ಅಂತಹ ತಿರುವುಗಳು ಸಿಕ್ಕಿವೆ. ಇವತ್ತು ವಿ. ಮನೋಹರ್ ಅದೆಷ್ಟು ಜನಪ್ರಿಯತೆ ಪಡೆದಿದ್ದಾರೋ, ಅವೆಲ್ಲಕ್ಕೂ ಆ ಟರ್ನಿಂಗ್‍ ಪಾಯಿಂಟ್‍ಗಳೇ ಕಾರಣ. ಆ ಟರ್ನಿಂಗ್‍ ಪಾಯಿಂಟ್‍ಗಳು ಯಾವುವು ಗೊತ್ತಾ? 'ಜನುಮದ ಜೋಡಿ' ಮತ್ತು 'ಮಾಂಗಲ್ಯಂ ತಂತು ನಾನೇನ'.

ಅದಕ್ಕೂ ಮೊದಲು ಡಾ. ರಾಜಕುಮಾರ್ ಕ್ಯಾಂಪಿನ ಚಿತ್ರಗಳಿಗೆ ಹಂಸಲೇಖ ಮತ್ತು ಉಪೇಂದ್ರ ಕುಮಾರ್ ಹೆಚ್ಚಾಗಿ ಸಂಯೋಜಿಸುತ್ತಿದ್ದರು. 1996ರಲ್ಲಿ ಬಿಡುಗಡೆಯಾದ 'ಜನುಮದ ಜೋಡಿ' ಚಿತ್ರಕ್ಕೆ ವಿ. ಮನೋಹರ್ ಮೊದಲ ಬಾರಿಗೆ ಸಂಗೀತ ಸಂಯೋಜಿಸಿದ್ದರು. 'ಕೋಲುಮಂಡೆ ಜಂಗಮ ದೇವ .', 'ಮಣಿ ಮಣಿ ಮಣಿ .' ಮುಂತಾದ ಹಾಡುಗಳು ಜನಪ್ರಿಯವಾಗುವುದರ ಜೊತೆಗೆ, ಆ ಚಿತ್ರಕ್ಕೆ ರಾಜ್ಯ ಸರ್ಕಾರದಿ...