Bengaluru, ಏಪ್ರಿಲ್ 24 -- ಅಷ್ಟಕ್ಕೂ ಇಂಥ ಕಥೆ ತಂದೆ ನಿನ್ನ ತಲೆ ಕಡೀತಿನಿ ಎಂದು ಪಾರ್ವತಮ್ಮ ರಾಜ್‌ಕುಮಾರ್‌ ಹೀಗೆ ಹೇಳಿದ್ದು ಯಾರಿಗೆ? ಅದರ ಹಿಂದಿನ ಉದ್ದೇಶ ಏನಾಗಿತ್ತು? ಕೊನೆಗೆ ಆ ಸಿನಿಮಾ ಆಯ್ತಾ? ಅದೆಲ್ಲದರ ಬಗ್ಗೆ ಇಲ್ಲಿದೆ ಉತ್ತರ.

ಅಣ್ಣಾವ್ರು ಯಾವುದೇ ಸಿನಿಮಾ ಮಾಡಿದರೂ, ಮೊದಲಿಗೆ ಪಾರ್ವತಮ್ಮ ಅವರ ಒಪ್ಪಿಗೆ ಬೇಕೇಬೇಕು. ಕಥೆಯ ಆಯ್ಕೆಯಲ್ಲಿ ಪಾರ್ವತಮ್ಮ ಮತ್ತು ವರದಪ್ಪ ಅವರ ಆಯ್ಕೆಯೇ ಅಂತಿಮ. ಏಕೆಂದರೆ ರಾಜ್‌ಕುಮಾರ್‌ ಹಲವು ಸಿನಿಮಾಗಳಲ್ಲಿ ಬಿಜಿಯಾಗಿರುತ್ತಿದ್ದರು. ಕಥೆ ಕೇಳುವ ವ್ಯವಧಾನವೂ ಇರುತ್ತಿರಲಿಲ್ಲ.

ಹೀಗಿರುವಾಗ ಆಗಿನ ಕಾಲದ ಸ್ಟಾರ್‌ ನಿರ್ದೇಶಕ ಮತ್ತು ರಾಜ್‌ಕುಮಾರ್‌ ಕುಟುಂಬದ ಆಪ್ತರಲ್ಲಿ ಒಬ್ಬರಾಗಿದ್ದ ಭಗವಾನ್‌ ಅವರು 1982 ಹೊಸ ಬೆಳಕು ಸಿನಿಮಾ ಮಾಡಿ ಗೆದ್ದಿದ್ದರು.

ಆ ಸಿನಿಮಾ ಬಳಿಕ ಅಣ್ಣಾವ್ರಿಗೆ, ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿ ವೆಂಕಟೇಶ್‌ ಅಯ್ಯಂಗಾರ ಅವರ ಸುಬ್ಬಣ್ಣ ಕೃತಿಯನ್ನು ಹಿಡಿದು ತಂದಿದ್ದರು.

ಆಗಿನ ಕಾಲದಲ್ಲಿಯೇ ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಅವರಿಗೆ 10 ಸಾವಿರ ...