ಭಾರತ, ಫೆಬ್ರವರಿ 5 -- ಮದುವೆಗೆ ಮಾಡುವ ಅನಗತ್ಯ ಖರ್ಚುವೆಚ್ಚಗಳ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಲಕ್ಷ್ಮಿ ಚಿತ್ಲೂರು ಬರೆದ ಬರಹ ಇಲ್ಲಿದೆ. ದುಡ್ಡಿರುವವರು, ಆಗರ್ಭ ಶ್ರೀಮಂತರು ಮಾತ್ರವಲ್ಲದೆ ಮಧ್ಯ - ಕೆಳಮಧ್ಯಮ ವರ್ಗದವರೂ ಇವೆಲ್ಲವನ್ನೂ ಮಾಡಲು ಹೋಗಿ ಸಾಲ - ಸೋಲಗಳಲ್ಲಿ ಮುಳುಗುತ್ತಿರುವುದು ಅತ್ಯಂತ ಶೋಚನೀಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅವರ ಫೇಸ್‌ಬುಕ್‌ ಪೋಸ್ಟ್‌ ಅನ್ನು ಯಥಾವತ್ತು ಇಲ್ಲಿ ನೀಡಲಾಗಿದೆ.

ಲಕ್ಷ್ಮಿ ಚಿತ್ಲೂರು ಬರಹ: ಆಹ್ವಾನ ಪತ್ರ(invitation card) ಮದುವೆಗೆಂದು ಆಹ್ವಾನಿಸಲು ನೀಡುವ ಪತ್ರಕ್ಕೆಂದೇ ಸಾವಿರಾರು ರೂಪಾಯಿಗಳ ಖರ್ಚು ಮಾಡಿ ಕೊಡುವ cardಗಳನ್ನ ಬಹುತೇಕರು ತೆರೆದು ಕೂಡಾ ನೋಡುವುದಿಲ್ಲ ಇಲ್ಲಿಂದ ಶುರುವಾಗುವ ಈ ದುಂದು ವೆಚ್ಚ ಹೇಗಿರುತ್ತದೆ ನೀವೇ ನೋಡಿ... ಸಾವಿರಾರು ಜನರನ್ನು ಮದುವೆಗೆ ಕರೆಯುವುದು (ಕರೆದವರಿಗೆ ಯಾರು ಬಂದರು ಎಂದು ಗಮನಿಸಲೂ ಸಮಯವಿಲ್ಲ. ಹಾಜರಾದವರಿಗೆ 6 ತಿಂಗಳ ನಂತರ ಯಾವ/ಯಾರ ಮದುವೆಗೆ ಹೋಗಿರುವುದು ಸಹ ನೆನಪಿರುವುದಿಲ್ಲ).

ನಿಶ್ಚಿತಾರ್ಥದ ಹೆಸರಿನಲ್ಲಿ ವಿವಾ...