ಭಾರತ, ಫೆಬ್ರವರಿ 4 -- ಕಂಪ್ಯೂಟರ್‌ ಅಥವಾ ಮೊಬೈಲ್‌ ಫೋನ್‌ನಲ್ಲಿ ಕನ್ನಡ ಟೈಪಿಂಗ್‌ ವಿಷಯ ಬಂದಾಗ ನುಡಿ, ಯುನಿಕೋಡ್‌, ಆಸ್ಕಿ (ASCII) ಮೊದಲಾದ ತಾಂತ್ರಿಕ ಪದಗಳು ತಿಳಿಯುತ್ತವೆ. ಇವೆಲ್ಲಾ ಏನು? ಆಸ್ಕಿ ಮತ್ತು ಯುನಿಕೋಡ್‌ ನಡುವಿನ ವ್ಯತ್ಯಾಸವೇನು? ಅದರ ಅಗತ್ಯವೇನು ಎಂಬೆಲ್ಲಾ ವಿಷಯದ ಕುರಿತು ಬರಹಗಾರ ಮಧುಸೂದನ ಅವರು ತಮ್ಮ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ. ಸರಳ ವಿವರಣೆ ಮೂಲಕ ಈ ತಾಂತ್ರಿಕ ಮಾಹಿತಿ ಅರ್ಥಮಾಡಿಸುವ ಪ್ರಯತ್ನ ಮಾಡಿದ್ದಾರೆ. ಮುಂದೆ ಇರುವುದು ಮಧುಸೂದನ ಅವರ ಬರಹ.

ಒಂದಾನೊಂದು ಕಾಲದಲ್ಲಿ(1960s) ಕಂಪ್ಯೂಟರ್ ಮೊದಲ ಸಲ ಜಗತ್ತಿಗೆ ಕಾಲಿಟ್ಟಾಗ, ಆಗಿನ ಅಗತ್ಯ ಅದಕ್ಕೆ ಕೇವಲ ಇಂಗ್ಲೀಷ್‌ ಅನ್ನು ಮಾತ್ರ ಅರ್ಥ ಮಾಡಿಸುವುದಾಗಿತ್ತು. ಅದಕ್ಕೆ ಕೇವಲ ಒಂದು-ಸೊನ್ನೆ(ಬಿಟ್) ಅರ್ಥವಾಗುತ್ತಿದ್ದರಿಂದ ಇಂಗ್ಲೀಷನ್ನು ಬಿಟ್‌ಗೆ ಭಾಷಾಂತರ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಅದಕ್ಕಾಗಿ 7 ಬಿಟ್‌ಗಳನ್ನು ನಿಗದಿ ಮಾಡಲಾಯಿತು. ಆಗಿನ ಕಂಪ್ಯೂಟರ್‌ನ ಶಕ್ತಿ ಎಂಟು ಬಿಟ್‌ಗಳಾಗಿದ್ದು ಎಂಟನೆಯ ಬಿಟ್‌ಅನ್ನು ಎರರ...