Tamil nadu, ಮೇ 16 -- ಮೈಸೂರಿನಿಂದ ಬಂಡೀಪುರ ದಾಟಿಕೊಂಡು ಊಟಿ ಕಡೆಗೆ ಹೊರಟರೆ ಸಿಗುವುದೇ ಮದುಮಲೈ ಅರಣ್ಯ ಪ್ರದೇಶ. ಅದೂ ಕೂಡ ಹುಲಿ ರಾಷ್ಟ್ರೀಯ ಉದ್ಯಾನವೇ. ಶತಮಾನದಷ್ಟು ಹಳೆಯದಾದ ಅಲ್ಲಿನ ತೆಪ್ಪಕಾಡು ಆನೆ ಶಿಬಿರ ಗಮನ ಸೆಳೆಯುತ್ತದೆ.

ಎರಡು ವರ್ಷದ ಹಿಂದೆ ಆಸ್ಕರ್‌ ಪ್ರಶಸ್ತಿ ಮೂಲಕ ಗಮನ ಸೆಳೆದದ್ದು ಇದೇ ತೆಪ್ಪಕಾಡು ಅರಣ್ಯಪ್ರದೇಶವೇ. ಇಲ್ಲಿನ ಬೊಮ್ಮನ್‌ ಹಾಗೂ ಬೆಳ್ಳಿ ಎಂಬ ಜೋಡಿ ಆನೆ ಸಲಹುವ ಹಿನ್ನೆಲೆಯೊಂದಿಗೆ ರೂಪುಗೊಂಡ ಎಲೆಫೆಂಟ್‌ ವಿಸ್ಪರರ್ಸ್‌ ಎನ್ನುವ ಚಿತ್ರಕ್ಕೆ ಆಸ್ಕರ್‌ ಚಿತ್ರ ಬಂದಿತು.

ಯಾವಾಗ ತೆಪ್ಪಕಾಡು ಹಿನ್ನೆಲೆಯನ್ನು ಒಳಗೊಂಡ ಆನೆಗಳು ಹಾಗೂ ಅಲ್ಲಿನ ಗಜ ಸೇವಕರ ಕಥಾನಕ ಒಳಗೊಂಡ ಚಿತ್ರಕ್ಕೆ ಆಸ್ಕರ್‌ ಪ್ರಶಸ್ತಿ ಬಂತೋ ತಮಿಳುನಾಡು ಸರ್ಕಾರ ಸೌಲಭ್ಯ ನೀಡಲು ಮುಂದಾಯಿತು,

ಶತಮಾನದ ಹಿನ್ನೆಲೆಯ ತೆಪ್ಪಕಾಡು ಆನೆ ಶಿಬಿರದಲ್ಲಿ 27 ಆನೆಗಳಿದ್ದು, ನಿತ್ಯ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಆನೆಗಳನ್ನು ನೋಡಿಕೊಳ್ಳುವ ಸಿಬ್ಬಂದಿಗಳಿದ್ದಾರೆ. ಮಾವುತರು, ಕವಾಡಿಗರಿಗೆ ಆನೆ ಸೇವೆಯೇ ವೃತ್ತಿಯಾಗಿದೆ.

ಅತ್ಯು...