ಭಾರತ, ಏಪ್ರಿಲ್ 19 -- ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ಮತ್ತೆ ಗೆಲುವಿನ ಹಳಿಗೆ ಮರಳಿದೆ. ಅತ್ತ ಕೊನೆಯ ಮೂರು ಪಂದ್ಯಗಳಲ್ಲಿ ಸೋತು ಕಂಗೆಟ್ಟಿದ್ದ ರಾಜಸ್ಥಾನ್‌ ರಾಯಲ್ಸ್‌, ಸತತ ಸೋಲಿನ ಸಂಖ್ಯೆಯನ್ನು ನಾಲ್ಕಕ್ಕೇ ಏರಿಸಿದೆ. ರಾಯಲ್ಸ್‌ ತವರು ಮೈದಾನದಲ್ಲಿ ನಡೆದ ಪಂದ್ಯವು, ಕೊನೆಯ ಓವರ್‌ನ ಕೊನೆಯ ಎಸೆತದವರೆಗೂ ರೋಚಕತೆ ಉಳಿಸಿತ್ತು. ಆವೇಶ್‌ ಖಾನ್‌ ಎಸೆದ ಅಂತಿಮ ಓವರ್‌ನಲ್ಲಿ ಗೆಲುವಿನ ದಡ ಸೇರಲು ರಾಜಸ್ಥಾನಕ್ಕೆ ಸಾಧ್ಯವಾಗಲಿಲ್ಲ. ಅಂತಿಮ ಓವರ್‌ನಲ್ಲಿ ಕೇವಲ 6 ರನ್‌ ಬಿಟ್ಟಿಕೊಟ್ಟು ರಾಯಲ್ಸ್‌ ದಾಂಡಿಗರನ್ನು ಕಟ್ಟಿಹಾಕಿದ ಆವೇಶ್‌, ಪಂದ್ಯಕ್ಕೆ ಅಚ್ಚರಿಯ ಫಲಿತಾಂಶ ತಂದುಕೊಡುವಲ್ಲಿ ಯಶಸ್ವಿಯಾದರು.

ಕೊನೆಯ ಓವರ್‌ನ ಕೊನೆಯ ಎಸೆತದವರೆಗೂ ರಾಜಸ್ಥಾನಕ್ಕೆ ಗೆಲುವು ಹತ್ತಿರವಿತ್ತು. ಆದರೆ ಕೊನೆಯ ಓವರ್‌ ಎಲ್ಲವನ್ನೂ ಬದಲಿಸಿತು. ಈ ಶ್ರೇಯಸ್ಸು‌ ಆವೇಶ್‌ ಖಾನ್‌ಗೆ ಸಲ್ಲುತ್ತದೆ. ಇದು ಲಕ್ನೋ ಪಾಲಿಗೆ ಅಚ್ಚರಿಯ ಗೆಲುವೇ ಸರಿ. ಇದೇ ವೇಳೆ ರಾಜಸ್ಥಾನಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಬೇಸರವಂತೂ ಪಕ್ಕ.

ಪಂದ್ಯದಲ್ಲಿ ...