Bangalore, ಮೇ 8 -- Aavesham OTT release date: ಫಹಾದ್ ಫಾಸಿಲ್ ಅಭಿನಯದ ಬ್ಲಾಕ್‌ಬಸ್ಟರ್‌ ಮಲಯಾಳಂ ಸಿನಿಮಾ ಆವೇಶಂ ಇನ್ನೂ ಚಿತ್ರಮಂದಿರಗಳಲ್ಲಿ ಓಡುತ್ತಿದೆ. ಈ ಸಿನಿಮಾ ಏಪ್ರಿಲ್ 11 ರಂದು ಬಿಡುಗಡೆಯಾಯಾಗಿತ್ತು. ಸ್ಯಾಕ್‌ನಿಲ್ಕ್‌.ಕಾಆಂ ವರದಿ ಪ್ರಕಾರ ಈ ಸಿನಿಮಾ ಬಿಡುಗಡೆಯಾದ ಇದು 26 ನೇ ದಿನದಂದು 1.10 ಕೋಟಿ ರೂ. ಗಳಿಸಿದೆ. ಚಿತ್ರಮಂದಿರಗಳಲ್ಲಿ ಓಡುತ್ತಿದರೂ ಶೀಘ್ರದಲ್ಲಿ ಅಂದರೆ ಮೇ 9 ಅಂದರೆ ನಾಳೆ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

ಆವೇಶಂ ಸಿನಿಮಾವು ಭಾರತದಲ್ಲಿ 93.9 ಕೋಟಿ ರೂ. ಗಳಿಕೆ ಮಾಡಿತ್ತು. ಸಾಗರೋತ್ತರ ಮಾರುಕಟ್ಟೆಯಿಂದ 53 ಕೋಟಿ ರೂ. ಗಳಿಕೆ ಮಾಡಿದೆ. ಓಟ್ಟಾರೆ ಆವೇಶಂನ ವಿಶ್ವಾದ್ಯಂತ ಬಾಕ್ಸ್ ಆಫೀಸ್ ಸಂಗ್ರಹವು 146.9 ಕೋಟಿ ರೂಗೆ ತಲುಪಿದೆ. ಈ ಚಿತ್ರದ ಬಜೆಟ್‌ 30 ಕೋಟಿ ರೂಪಾಯಿ ಆಗಿತ್ತು.

ಹಲವು ಕಾರಣಗಳಿಂದ ಆವೇಶಂ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡಿಲ್ಲದೆ ಇರಬಹುದು. ಪರಭಾಷೆಯ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿಲ್ಲದೆ ಇರುವವರು ಕನ್ನಡ ಸೇರಿದಂತೆ ತಮಗೆ ಇಷ್ಟವಾಗುವ ಯಾವುದೇ ಭಾಷೆಯಲ...