ಭಾರತ, ಮೇ 21 -- ಶ್ರೀನಗರ/ನವದೆಹಲಿ: ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರಕ್ಕೆ ದೆಹಲಿಯಿಂದ ಹೊರಟಿದ್ದ ಇಂಡಿಗೋ ವಿಮಾನದ ಮೂತಿ ಆಲಿಕಲ್ಲು ಮಳೆಗೆ ಒಡೆದುಹೋಗಿದೆ. ಹಾರಾಟದ ನಡುವೆ ಈ ಹಾನಿ ಸಂಭವಿಸಿದ ಕಾರಣ, ವಿಮಾನ ತೀವ್ರ ನಡುಕಕ್ಕೆ ಒಳಗಾಗಿದ್ದು, ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಇಲ್ಲದೇ ಎಲ್ಲರೂ ಸುರಕ್ಷಿತವಾಗಿ ವಿಮಾನ ನಿಲ್ದಾಣದಲ್ಲಿ ಇಳಿದರು. ಹಾನಿಗೀಡಾದ ವಿಮಾನವು ಶ್ರೀನಗರದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಎಲ್ಲರೂ ಸುರಕ್ಷಿವಾಗಿ ಇದ್ದಾರೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ರಾಷ್ಟ್ರ ರಾಜಧಾನಿ ದೆಹಲಿಯಿಂದ ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರಕ್ಕೆ ಹೊರಟಿದ್ದ ಇಂಡಿಗೋ ವಿಮಾನ (6E 2142) ಹಾರಾಟದಲ್ಲಿದ್ದಾಗ ದಿಢೀರ್ ಆಲಿಕಲ್ಲು ಮಳೆ ಎದುರಿಸಿದೆ. ಇದರಿಂದಾಗಿ ವಿಮಾನದ ಮೂತಿ ಒಡೆದು ಹಾನಿಗೀಡಾಯಿತು. ನಂತರ ವಿಮಾನದಲ್ಲಿ ಉಂಟಾದ ನಡುಕದ ಅನುಭವ ಪ್ರಯಾಣಿಕರಲ್ಲಿ ಭಾರಿ ಆತಂಕ, ಕಳವಳ ಮೂಡಿಸಿತ್ತು.
ಹಾನಿಗೀಡಾದ ಈ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.