Bangalore, ಮಾರ್ಚ್ 1 -- Karnataka Resevoirs: ಕರ್ನಾಟಕದಲ್ಲಿ ಬೇಸಿಗೆ ಬಿರುಸುಗೊಳ್ಳುತ್ತಿರುವ ನಡುವೆ ಜಲಾಶಯಗಳಲ್ಲಿ ನೀರಿನ ಮಟ್ಟ ನಿಧಾನವಾಗಿ ಕುಸಿಯುತ್ತಿದೆ. ತೆಲಂಗಾಣಕ್ಕೆ ನೀರು ಹರಿಸುತ್ತಿರುವ ಕಾರಣದಿಂದ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದ ನೀರಿನ ಪ್ರಮಾಣದಲ್ಲಿ ಭಾರೀ ಇಳಿಕೆ ಕಂಡಿದೆ. ಇದಲ್ಲದೇ ತುಂಗಭದ್ರಾ ಜಲಾಶಯದಿಂದ ನೀರು ಹೊರ ಹೋಗುತ್ತಿರುವ ಕಾರಣಕ್ಕೆ ಆ ಜಲಾಶಯದ ಪ್ರಮಾಣವೂ ಕಡಿಮೆಯಾಗಿದೆ. ಬೆಳಗಾವಿಯ ಮಲಪ್ರಭಾ, ಕೊಡಗಿನ ಹಾರಂಗಿ ಜಲಾಶಯದ ನೀರಿನ ಪ್ರಮಾಣ ಶೇ. 50ಕ್ಕಿಂತ ಕಡಿಮೆಯಾಗಿದೆ. ಕರ್ನಾಟಕದಲ್ಲಿ ಪ್ರಮುಖ 14 ಜಲಾಶಯಗಳಲ್ಲಿ ಗರಿಷ್ಠ 895.62 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ. ಸದ್ಯ491.18 ಟಿಎಂಸಿ ನೀರು ಸಂಗ್ರಹವಿದೆ. ಶೇ. 55 ರಷ್ಟು ನೀರು ಸಂಗ್ರಹಿಸಲಾಗಿದೆ. ಕಳೆದ ವರ್ಷ ಇದೇ ದಿನ ಎಲ್ಲಾ ಜಲಾಶಯಗಳಲ್ಲಿ312.48 ಟಿಎಂಸಿ ನೀರಿತ್ತು. ಸದ್ಯ ಒಳಹರಿವಿನ ಪ್ರಮಾಣ 118 ಕ್ಯೂಸೆಕ್‌ ಇದ್ದರೆ, ಹೊರ ಹರಿವು 46415ಕ್ಯೂಸೆಕ್‌ ಇದೆ.

ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದಲ್ಲಿ 123.08ಟಿಎಂಸಿ ನೀರು...