ಭಾರತ, ಮಾರ್ಚ್ 31 -- ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಪಂದ್ಯವೆಂದರೆ, ಅಲ್ಲಿ ರೋಚಕ ಹಣಾಹಣಿ ಖಚಿತ. ಐಪಿಎಲ್‌ನ ಎರಡು ಬಲಿಷ್ಠ ಹಾಗೂ ಹೆಚ್ಚು ಅಭಿಮಾನಿ ಬಳಗ ಇರುವ ತಂಡಗಳೆರಡರ ನಡುವಿನ ಪಂದ್ಯದ ಸಮಯದಲ್ಲಿ ಸಹಜವಾಗಿ ಅಭಿಮಾನಿಗಳಲ್ಲಿಯೂ ಜೋಶ್‌ ಇರುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಷ್ಟು ರೋಚಕತೆ ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವಿನ ಪಂದ್ಯದ ಸಮಯದಲ್ಲಿ ಇರುತ್ತದೆ ಎಂದು ಹೇಳಲಾಗುತ್ತದೆ. ಮೈದಾನದಲ್ಲಿ ತಂಡದ ಆಟಗಾರರ ನಡುವಿನ ಪೈಪೋಟಿ ಒಂದೆಡೆಯಾದರೆ, ಮೈದಾನದ ಹೊರಗೆ ಅಭಿಮಾನಿಗಳ ನಡುವೆಯೂ ಫ್ಯಾನ್‌ವಾರ್‌ ನಡೆಯುತ್ತಿರುತ್ತದೆ.

ಇತ್ತೀಚೆಗೆ ಚೆನ್ನೈನ ಚೆಪಾಕ್‌ ಮೈದಾನದಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳು ಮುಖಾಮುಖಿಯಾಗಿದ್ದವು. ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು 50 ರನ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತ್ತು. ಅದು ಕೂಡಾ ಚೆನ್ನೈನಲ್ಲಿ ಬರೋಬ್ಬರಿ 17 ವರ್ಷಗಳ ನಂತರ ಗೆಲುವು ಒಲಿದಿತ್ತು. ಇದು ಆರ್‌ಸಿಬಿ ಫ್ಯಾನ್ಸ್‌ ಉತ್ಸಾಹ ದು...