ಭಾರತ, ಮಾರ್ಚ್ 27 -- 2024ರ ಐಪಿಎಲ್‌ನ ಆ ರೋಚಕ ಪಂದ್ಯವನ್ನು ಆರ್‌ಸಿಬಿ ಅಭಿಮಾನಿಗಳು ಮರೆಯಲು ಹೇಗೆ ತಾನೆ ಸಾಧ್ಯ. ತುಂಬಿದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ತಂಡವು, ಸಿಎಸ್‌ಕೆ ಆಟಗಾರರು ಹಾಗೂ ಅಭಿಮಾನಿಗಳ ಸದ್ದಡಗಿಸಿದ ದಿನವು ಕ್ರಿಕೆಟ್‌ ಲೋಕದಲ್ಲಿ ಮಾತ್ರವಲ್ಲದೆ ಇಂಟರ್ನೆಟ್‌ನಲ್ಲೂ ಹಬ್ಬದ ವಾತಾವರಣವನ್ನೇ ಸೃಷ್ಟಿಸಿತ್ತು. ಅದು ಕೇವಲ ಪಂದ್ಯವಷ್ಟೇ ಆಗಿರಲಿಲ್ಲ. ಸಿಎಸ್‌ಕೆ ತಂಡವನ್ನು ಸೋಲಿಸಿ ಆರ್‌ಸಿಬಿ ತಂಡವು ಪ್ಲೇಆಫ್‌ಗೆ ಪ್ರವೇಶಿಸಿದ್ದು ಒಂದೆಡೆಯಾದರೆ, ಸಿಎಸ್‌ಕೆ ತಂಡವನ್ನು ಪ್ಲೇಆಫ್‌ ರೇಸ್‌ನಿಂದ ಹೊರದಬ್ಬಿದ್ದು ಮತ್ತೊಂದು ಪ್ರಮುಖ ಅಂಶ. ಇದೀಗ ಇದೇ ಎರಡು ತಂಡಗಳ ಮತ್ತೊಂದು ರೋಚಕ ಮುಖಾಮುಖಿಗೆ ವೇದಿಕೆ ಸಜ್ಜಾಗಿದೆ. ಐಪಿಎಲ್‌ 2025ರ ಆವೃತ್ತಿಯಲ್ಲಿ ಮಾರ್ಚ್‌ 28ರ ಗುರುವಾರ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದ್ದು, ಚೆಪಾಕ್‌ ಮೈದಾನದಲ್ಲಿ ಸಿಎಸ್‌ಕೆ ವಿರು...