ಭಾರತ, ಏಪ್ರಿಲ್ 23 -- ಐಪಿಎಲ್ 2025ರ ಆವೃತ್ತಿಯಲ್ಲಿ ತವರು ಮೈದಾನದಲ್ಲಿ ಒಂದೂ ಗೆಲುವು ಸಾಧಿಸದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ, ತವರು ಮೈದಾನವೇ ಭೇದಿಸಲಾಗದ ಕೋಟೆಯಾಗಿದೆ. ತವರಿನ ಹೊರಗೆ ಅಜೇಯರಾಗಿ ಬೀಗುತ್ತಿರುವ ಆರ್‌ಸಿಬಿ ಆರ್ಮಿ, ಅಭಿಮಾನಿಗಳ ಸ್ವರ್ಗ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ವಿಜಯ ಎದುರು ನೋಡುತ್ತಿದೆ. ಏಪ್ರಿಲ್‌ 24ರ ಗುರುವಾರ ತಂಡವು ರಾಜಸ್ಥಾನ ರಾಯಲ್ಸ್ (Royal Challengers Bengaluru vs Rajasthan Royals) ವಿರುದ್ಧ ಪ್ರಸಕ್ತ ಆವೃತ್ತಿಯಲ್ಲಿ ಎರಡನೇ ಬಾರಿಗೆ ಕಣಕ್ಕಿಳಿಯಲಿದೆ.

ಟೂರ್ನಿಯಲ್ಲಿ ಸೊಂಟ ಮುರಿದಂತೆ ಆಡುತ್ತಿರುವ ರಾಜಸ್ಥಾನಕ್ಕೆ ಸ್ಥಿರತೆ ಸಿಕ್ಕಿಲ್ಲ. ಇದುವರೆಗೆ ಕೇವಲ 2 ಪಂದ್ಯಗಳಲ್ಲಿ ಗೆದ್ದಿರುವ ತಂಡವು ಕೊನೆಯ ಬಾರಿಗೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಸೂಪರ್‌ ಓವರ್‌ ಸೋಲಿನ ಬೆನ್ನಲ್ಲೇ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅಂತಿಮ ಓವರ್‌ನಲ್ಲಿ ಕೇವಲ ಎರಡು ರನ್‌ಗಳಿಂದ ಮುಗ್ಗರಿಸಿತು. ತಂಡದ ನಿಯಮಿತ ನಾಯಕ ಸಂಜು ಸ್ಯಾಮ್ಸನ್ ತಂಡದಲ್ಲಿ ನಿಯಮಿತವಾಗಿ ಆಡುತ್ತಿ...