ಭಾರತ, ಏಪ್ರಿಲ್ 6 -- ಐಪಿಎಲ್‌ನಲ್ಲಿ ಏಪ್ರಿಲ್ 7ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್‌ ತಂಡಗಳು ಮುಖಾಮುಖಿಯಾಗುತ್ತಿವೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಕ್ಕೂ ಮುಂಚೆ, ಅಭಿಮಾನಿಗಳಿಗೆ ಎಂಐ ಫ್ರಾಂಚೈಸಿ ಶುಭಸುದ್ದಿ ನೀಡಿದೆ. ತಂಡದ ಮುಂದಿನ ಪಂದ್ಯಕ್ಕೆ ಮುಂಚಿತವಾಗಿ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್ ತಂಡವನ್ನು ಮತ್ತೆ ಸೇರಿಕೊಂಡಿದ್ದಾರೆ. ಆದರೆ, ದೀರ್ಘಕಾಲದ ಗಾಯದ ವಿರಾಮದಿಂದ ಮತ್ತೆ ತಂಡಕ್ಕೆ ಹಿಂದಿರುಗಿರುವ ಅವರು ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ತುಂಬಾ ಕಡಿಮೆ ಇದೆ.

ಈ ವರ್ಷದ ಆರಂಭದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿ ವೇಳೆ ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ವೇಳೆ ಬುಮ್ರಾ ಬೆನ್ನುನೋವಿನಿಂದ ಹೊರಗುಳಿದಿದ್ದರು. ಬಿಸಿಸಿಐ ವೈದ್ಯಕೀಯ ತಂಡವು, ಐದು ವಾರಗಳ ಕಾಲ ವಿಶ್ರಾಂತಿ ಪಡೆಯಲು ಸಲಹೆ ನೀಡಿತ್ತು. ಹೀಗಾಗಿ ಅವರು ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ವೈಟ್-ಬಾಲ್ ಸರಣ...