ಭಾರತ, ಜೂನ್ 6 -- ನಿಧಾನಗತಿಯ ಬೆಳವಣಿಗೆ ಮತ್ತು ಸ್ಥಿರವಾಗಿರುವ ಹಣದುಬ್ಬರ ಮಧ್ಯೆ, ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಶುಕ್ರವಾರ (ಜೂನ್ 6) ನಿರೀಕ್ಷೆ ಮೀರಿ ರೆಪೊ ದರವನ್ನು 50 ಮೂಲಾಂಶವನ್ನು ಇಳಿಕೆ ಮಾಡಿತು. ಇದು ಮೂರನೇ ಸಲ ಆರ್‌ಬಿಐ ರೆಪೋ ದರ ಇಳಿಕೆ ಮಾಡಿರುವಂಥದ್ದು. ಆರ್‌ಬಿಐ ಗವರ್ನರ್‌ ಸಂಜಯ್ ಮಲ್ಹೋತ್ರಾ ನೇತೃತ್ವದ ಆರು ಸದಸ್ಯರ ವಿತ್ತೀಯ ನೀತಿ ಸಮಿತಿ (ಎಂಪಿಸಿ) ರೆಪೋ ದರವನ್ನು 5.50 ಪ್ರತಿಶತಕ್ಕೆ ಇಳಿಸುವ ತೀರ್ಮಾನವನ್ನು ಪ್ರಕಟಿಸಿದೆ.

ನೀವು ಮನೆ ಸಾಲ ಅಥವಾ ವಾಹನ ಸಾಲ ಪಡೆದವರು ಅಥವಾ ಪಡೆಯಲು ಸಜ್ಜಾಗಿದ್ದರೆ ಅಂಥವರಿಗೆ ಇದು ಖುಷಿಯ ಸುದ್ದಿ. ಆರ್‌ಬಿಐ ರೆಪೋ ದರವನ್ನು 50 ಮೂಲಾಂಶ ಇಳಿಕೆ ಮಾಡಿದೆ. ಸರಳವಾಗಿ ಹೇಳಬೇಕು ಎಂದರೆ 6 ಪ್ರತಿಶತ ಇರುವಂತಹ ರೆಪೋ ದರವನ್ನು ಶೇಕಡ 5.5ಕ್ಕೆ ಇಳಿಕೆ ಮಾಡಿದೆ. ಇದು ಸಾಲಗಳನ್ನು ಗ್ರಾಹಕರ ಕೈಗೆಟುಕುವಂತೆ ಮಾಡುವಲ್ಲಿ ನೆರವಾಗಲಿದೆ. ಏಪ್ರಿಲ್‌ನಲ್ಲಿ ಅರ್‌ಬಿಐ 25 ಮೂಲಾಂಶ ರೆಪೋ ದರ ಇಳಿಕೆ ಮಾಡಿತ್ತು.

ಬಹುದೊಡ್ಡ ಬಡ್ಡಿದರ ಇಳಿಕೆ: ಹಣದುಬ್ಬರ ಇಳಿಮುಖವಾಗುತ್ತಿರುವ...