ಭಾರತ, ಜೂನ್ 3 -- ಹೌದು.. ನಾವು ಚಾಂಪಿಯನ್..! ಈ ಸಲ ಕಪ್​ ನಮ್ದೇ..! 18 ವರ್ಷಗಳ ವನವಾಸ ಕೊನೆಗೂ ಕೊನೆಗೊಂಡಿತು.! 18ನೇ ಆವೃತ್ತಿಯ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್​ ವಿರುದ್ಧ ರೋಚಕ ಗೆಲುವಿನೊಂದಿಗೆ ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್​ ಪ್ರಶಸ್ತಿ ಗೆದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ನೂತನ ಚರಿತ್ರೆ ಸೃಷ್ಟಿಸಿದೆ. 132,000 ಪ್ರೇಕ್ಷಕರು ಐತಿಹಾಸಿಕ ಗೆಲುವಿಗೆ ಸಾಕ್ಷಿಯಾದರು. ಕೋಟ್ಯಂತರ ಅಭಿಮಾನಿಗಳ ಕನಸು ಕೊನೆಗೂ ಈಡೇರಿತು. 2016ರ ನಂತರ ಫೈನಲ್ ಪ್ರವೇಶಿಸಿದ್ದ ಆರ್​ಸಿಬಿ, ಈ ಹಿಂದೆ ಮೂರು ಬಾರಿಯೂ ರನ್ನರ್​ಅಪ್ ಆಗಿತ್ತು. ಆದರೆ ಪಂಜಾಬ್ ಕಿಂಗ್ಸ್​ ಕನಸು ಮತ್ತೆ ಭಗ್ನಗೊಂಡಿತು. ಇದು ಕೊನೆಯದಾಗಿ 2014ರಲ್ಲಿ ಫೈನಲ್​​​ ಆಡಿ ರನ್ನರ್​ಅಪ್ ಆಗಿತ್ತು.

191 ರನ್​ಗಳ ಸವಾಲಿನ ಮೊತ್ತ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಉತ್ತಮ ಆರಂಭ ಪಡೆಯಿತು. ಆದರೆ ಜೋಶ್ ಹೇಜಲ್​ವುಡ್ ಬ್ರೇಕ್ ಥ್ರೂ ಕೊಟ್ಟರು. ಉತ್ತಮ ಲಯದಲ್ಲಿದ್ದ ಪ್ರಿಯಾಂಶ್ ಆರ್ಯ (24) ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು. ಬಳಿಕ ಹಳಿ ತಪ್ಪುತ್ತಿದ್ದ ಆರ್​ಸಿಬ...