ಭಾರತ, ಮಾರ್ಚ್ 18 -- 18ನೇ ಆವೃತ್ತಿಯ ಐಪಿಎಲ್ ಮಾರ್ಚ್​ 22ರಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಲಿವೆ. ಈ ಆವೃತ್ತಿಯಲ್ಲಿ 74 ಪಂದ್ಯಗಳು 13 ಸ್ಥಳಗಳಲ್ಲಿ ನಡೆಯಲಿದ್ದು, 12 ಡಬಲ್-ಹೆಡರ್ ಪಂದ್ಯಗಳು ಇದರಲ್ಲಿ ಸೇರಿವೆ. ಪ್ರತಿ ತಂಡವು ತಲಾ 14 ಪಂದ್ಯಗಳಲ್ಲಿ ಕಣಕ್ಕಿಳಿಯಲಿವೆ. ಏಳು ಪಂದ್ಯಗಳನ್ನು ತವರು ಮೈದಾನದಲ್ಲಿ ಮತ್ತು 7 ಪಂದ್ಯಗಳನ್ನು ಇತರ ತಂಡಗಳ ಸ್ಥಳಗಳಲ್ಲಿ ಆಡಲಿದೆ. ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು 9 ಸ್ಥಳಗಳಲ್ಲಿ ಆಡಲಿವೆ. ಈ ತಂಡಗಳು ತಮ್ಮ 2ನೇ ತವರು ಮೈದಾನಗಳಲ್ಲಿ (ಕ್ರಮವಾಗಿ ವಿಶಾಖಪಟ್ಟಣಂ, ಗುವಾಹಟಿ ಮತ್ತು ಧರ್ಮಶಾಲಾ) ಆಡಲಿವೆ.

ಎರಡು ತಿಂಗಳ ಅವಧಿಯಲ್ಲಿ ಎಲ್ಲಾ ತಂಡಗಳು ಸಾಕಷ್ಟು ಪ್ರಯಾಣ ಬೆಳೆಸಲಿವೆ. ಈ ನಡುವೆ ತಂಡಗಳು ಪ್ರಾಕ್ಟೀಸ್ ಮಾಡಲು ಹಾಗೂ ವಿಶ್ರಾಂತಿ ಪಡೆಯಲು ಸಮಯಾವಕಾಶ ಸಿಗಲಿದೆ. ಆದರೂ ಕೆಲವು ತಂಡಗಳು ಮಾತ್ರ ಸಾಕಷ್ಟು ಪ್ರಯಾಣಿಸಬೇಕಿದೆ. ಹೀಗಿದ್ದರೂ ಕ...