ಭಾರತ, ಮಾರ್ಚ್ 26 -- ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಪಿಚ್ ಕ್ಯುರೇಟರ್ ಸುಜನ್ ಮುಖರ್ಜಿ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಅಜಿಂಕ್ಯ ರಹಾನೆ ಅವರ ಮನವಿಯೊಂದನ್ನು ನಿರಾಕರಿಸಿದ್ದಾರೆ. ಈಡನ್ ಪಿಚ್ ಅನ್ನು ಸ್ಪಿನ್‌ಗೆ ನೆರವಾಗುವಂತೆ ಸಿದ್ಧಪಡಿಸುವಂತೆ ರಹಾನೆ ಕೋರಿದ ಮನವಿಯನ್ನು ತಿರಸ್ಕರಿಸಿದ್ದಾರೆ. ಐಪಿಎಲ್​ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ವಿರುದ್ಧ 7 ವಿಕೆಟ್‌ಗಳ ಭಾರೀ ಸೋಲಿನ ನಂತರ, ರಹಾನೆ ತಮ್ಮ ತಂಡಕ್ಕೆ ಹೆಚ್ಚು ಬೆಂಬಲ ನೀಡುವ ಪಿಚ್‌ಗಾಗಿ ಕೇಳಿಕೊಂಡಿದ್ದರು.

ಆದಾಗ್ಯೂ, ದಶಕದಿಂದ ಈಡನ್ ಗಾರ್ಡನ್ಸ್ ಟರ್ಫ್ ಮತ್ತು ಪಿಚ್‌ ನಿರ್ವಹಿಸುತ್ತಿರುವ ಮುಖರ್ಜಿ ಅವರು, ರಹಾನೆ ವಿನಂತಿಗೆ ಮಣಿಯಲು ನಿರಾಕರಿಸಿದ್ದಾರೆ. ರೆವ್‌ಸ್ಪೋರ್ಟ್ಸ್‌ಗೆ ಮಾತನಾಡುತ್ತಾ, ಕೆಕೆಆರ್ ಅವಶ್ಯಕತೆಗಳಿಗೆ ತಕ್ಕಂತೆ ಪಿಚ್‌ನ ಸ್ವಭಾವ ಬದಲಾಯಿಸುವ ಯಾವುದೇ ಸಾಧ್ಯತೆಗಳನ್ನು ಮುಖರ್ಜಿ ತಕ್ಷಣವೇ ತಳ್ಳಿಹಾಕಿದ್ದಾರೆ. ನಾನು ಇಲ್ಲಿ ಇರುವ ತನಕ ಈಡನ್ ಪಿಚ್​​ ಬದಲಾವಣೆ ಅಸಾಧ್ಯ ಎಂದು ದೃಢವಾಗಿ ಹೇಳಿದ್ದಾರೆ.

ಇದನ್ನೂ ಓದಿ: ಶ್ರೇಯಸ್ ...