ಭಾರತ, ಮಾರ್ಚ್ 19 -- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು (Royal Challengers Bengaluru) ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2025) 18ನೇ ಆವೃತ್ತಿಯನ್ನು ಹೊಸ ನಾಯಕನ ನೇತೃತ್ವದಲ್ಲಿ ಪ್ರಾರಂಭಿಸಲಿದೆ. ಈ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಲಿರುವ ಫಾಫ್ ಡು ಪ್ಲೆಸಿಸ್ ಅವರಿಂದ ರಜತ್ ಪಾಟೀದಾರ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಪಾಟೀದಾರ್ ಆರ್​ಸಿಬಿ ತಂಡದ ಎಂಟನೇ ನಾಯಕ. 2021ರಲ್ಲಿ ಬೆಂಗಳೂರು ಮೂಲದ ಫ್ರಾಂಚೈಸಿಗೆ ಸೇರಿದಾಗಿನಿಂದ 3 ಸೀಸನ್‌ಗಳನ್ನು ಆಡಿರುವ 31 ವರ್ಷದ ಇಂದೋರ್‌ನಲ್ಲಿ ಜನಿಸಿದ ಬ್ಯಾಟ್ಸ್‌ಮನ್, 2022ರ ಸೀಸನ್​ ಮಧ್ಯದಲ್ಲಿ ಲುವ್ನಿತ್ ಸಿಸೋಡಿಯಾ ಬದಲಿಗೆ ಆರ್‌ಸಿಬಿಗೆ ಮರಳಿದ್ದರು. 2021ರಲ್ಲಿ ಆಡಿದ್ದು, ಕೇವಲ 4 ಪಂದ್ಯಗಳನ್ನಷ್ಟೆ. ಐಪಿಎಲ್ ಮೆಗಾ ಹರಾಜಿಗೂ ಮೊದಲು ಆರ್‌ಸಿಬಿ ತಂಡವು ಪಾಟೀದಾರ್, ಯಶ್ ದಯಾಳ್ ಮತ್ತು ವಿರಾಟ್ ಕೊಹ್ಲಿ ಮೂವರನ್ನು ಮಾತ್ರ ಉಳಿಸಿಕೊಂಡಿತ್ತು.

1. ಮಾರ್ಚ್ 22, ಶನಿವಾರ ಸಂಜೆ - 7:30: ಆರ್​ಸಿಬಿ vs ಕೋಲ್ಕತ್ತಾ ನೈಟ್ ರೈಡರ್ಸ್ (ಕೋಲ್ಕತ್ತಾ)

2. ಮಾರ್...