ಭಾರತ, ಮಾರ್ಚ್ 29 -- ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 50 ರನ್​ಗಳ ಅಂತರದಿಂದ ಸೋಲು ಅನುಭವಿಸಿದ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಹೆಡ್​ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರು ಪ್ರತಿಕ್ರಿಯಿಸಿದ್ದಾರೆ. ಚೆಪಾಕ್ ಮೈದಾನದಲ್ಲಿ ನಮಗೆ ಯಾವುದೇ ಅಡ್ವಾಂಟೇಜ್ ಇಲ್ಲ ಎಂದು ಹೇಳಿದ್ದಾರೆ. ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಗೆದ್ದು ಬೀಗಿದ ಆರ್​ಸಿಬಿ, 2008ರ ನಂತರ ಈ ಮೈದಾನದಲ್ಲಿ ಸಿಎಸ್​ಕೆ ಸೋಲಿಸಿದೆ.

ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ, ವರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಫ್ಲೆಮಿಂಗ್ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಮೊದಲ ಪಂದ್ಯದಲ್ಲಿ ನೀವು ಸುಮಾರು 20 ಓವರ್‌ಗಳಲ್ಲಿ 156 ರನ್‌ ಬೆನ್ನಟ್ಟಿದ್ದೀರಿ. ಇಂದು, 146 ರನ್‌ ಗಳಿಸಿದ್ದೀರಿ. ಇದು ನಿಮ್ಮ ಕ್ರಿಕೆಟ್ ಆಡುವ ವಿಧಾನ ಎಂದು ನನಗೆ ತಿಳಿದಿದೆ, ಆದರೆ ಈ ಬ್ಯಾಟಿಂಗ್ ಶೈಲಿ ತುಂಬಾ ಹಳೆಯದು ಎಂದು ನೀವು ಭಾವಿಸುತ್ತೀರಾ? ಎಂದು ವರದಿಗಾರ ಕೇಳಿದ.

ಇದಕ್ಕೆ ಉತ್ತರಿಸ...