Bangalore, ಏಪ್ರಿಲ್ 17 -- 2025ರ ಇಂಡಿಯನ್ ಪ್ರೀಮಿಯರ್ ಲೀಗ್​​ನ 33ನೇ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಂಘಟಿತ ಹೋರಾಟ ನೀಡಿದ ಮುಂಬೈ ಇಂಡಿಯನ್ಸ್​ ಸತತ 2ನೇ ಗೆಲುವು ದಾಖಲಿಸಿದೆ. ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ದಾಖಲೆ ರನ್ ಚೇಸ್ ಮಾಡಿದ್ದ ಸನ್​ರೈಸರ್ಸ್​ ಹೈದರಾಬಾದ್ 5ನೇ ಸೋಲಿಗೆ ಶರಣಾಗಿದ್ದು, ಅಂಕಪಟ್ಟಿಯಲ್ಲಿ9 ಸ್ಥಾನದಲ್ಲಿದೆ. ಮತ್ತೊಂದೆಡೆ ಮೂರನೇ ಜಯದ ನಗೆ ಬೀರಿದ ಎಂಐ, 7ನೇ ಸ್ಥಾನದಲ್ಲಿದೆ.

ಮುಂಬೈನ ಐಕಾನಿಕ್ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್​ರೈಸರ್ಸ್, ನಿಗದಿತ 20 ಓವರ್​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತು. ಅಭಿಷೇಕ್ ಶರ್ಮಾ 40 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್. ಈ ಗುರಿ ಬೆನ್ನಟ್ಟಿದ ಮುಂಬೈ, 18.1 ಓವರ್​​ಗಳಲ್ಲಿ 4 ವಿಕೆಟ್​​ಗೆ ಜಯದ ನಗೆ ಬೀರಿತು. ಇದು ಮುಂಬೈನ ಸತತ 2ನೇ ಗೆಲುವು. ಬೌಲಿಂಗ್​ನಲ್ಲಿ ಪ್ರಮುಖ 2 ವಿಕೆಟ್ ಉರುಳಿಸಿದ ವಿಲ್ ಜಾಕ್ಸ್...