ಭಾರತ, ಮೇ 22 -- 2025ರ ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಪ್ಲೇಆಫ್ ಪ್ರವೇಶಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಮತ್ತೊಂದು ಮಹತ್ವದ ಬದಲಾವಣೆಯಾಗಿದೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ವೇಗಿ ಲುಂಗಿ ಎನ್​ಗಿಡಿ ಜಾಗಕ್ಕೆ ಜಿಂಬಾಬ್ವೆಯ ಬ್ಲೆಸಿಂಗ್ ಮುಜರಬಾನಿ ಅವರನ್ನು ಆಯ್ಕೆ ಮಾಡಿದ್ದ ಆರ್​ಸಿಬಿ ಇದೀಗ ಇಂಗ್ಲೆಂಡ್​ನ ಸ್ಟಾರ್ ಬ್ಯಾಟರ್ ಜೇಕಬ್ ಬೆಥೆಲ್ ಬದಲಿಗೆ ನ್ಯೂಜಿಲೆಂಡ್​ನ ಕಿಲಾಡಿ ಬ್ಯಾಟರ್​ ಟಿಮ್ ಸೀಫರ್ಟ್ ಅವರನ್ನು 2 ಕೋಟಿಗೆ ತಂಡಕ್ಕೆ ಸೇರಿಸಿಕೊಂಡಿದೆ. ಬೆಂಗಳೂರು ಈ ಬಗ್ಗೆ ಅಧಿಕೃತವಾಗಿ ಪೋಸ್ಟ್ ಮಾಡಿದೆ.

ಮೇ 23ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಲೀಗ್ ಪಂದ್ಯದ ನಂತರ ಬೆಥೆಲ್ ಅವರನ್ನು ಆರ್‌ಸಿಬಿ ತಂಡದಿಂದ ಬಿಡುಗಡೆ ಮಾಡಲಾಗುವುದು. ಮೇ 29 ರಿಂದ ಪ್ರಾರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ವೈಟ್-ಬಾಲ್ ಸರಣಿಗಾಗಿ ಬೆಥೆಲ್ ಇಂಗ್ಲೆಂಡ್ ರಾಷ್ಟ್ರೀಯ ತಂಡವನ್ನು ಸೇರಲಿದ್ದಾರೆ. '#ನಮ್ಮಆರ್​​ಸಿಬಿಗೆ ಸ್ವಾಗತ, ಬಾಮ್ ಬಾಮ್' ಎಂದು ಸೀಫರ್ಟ್​ರನ್ನು ವೆಲ್​ಕಮ್ ಮಾಡಿಕೊಂಡಿದೆ. ಇವರು ವಿರಾಟ್ ...