ಭಾರತ, ಏಪ್ರಿಲ್ 10 -- ಎರಡು ರನ್ ಗಳಿಸಿದ್ದಾಗ ಜೀವದಾನ ಪಡೆದ ಕೆಎಲ್ ರಾಹುಲ್ (93*) ಸತತ 2ನೇ ಅರ್ಧಶತಕದ ಸಹಾಯದಿಂದ ಮತ್ತು ವಿಪ್ರಜ್ ನಿಗಮ್ (18/2), ಕುಲ್ದೀಪ್ ಯಾದವ್ (17/2) ಕೈಚಳಕದ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್​ಗಳ ಅಂತರದಿಂದ ಮಣಿಸಿದೆ. ಇದು ಡೆಲ್ಲಿಗೆ ಸತತ 4ನೇ ಗೆಲುವು. ಆರ್​ಸಿಬಿಗೆ ಇದು ತವರಿನಲ್ಲಿ ಸತತ 2ನೇ ಸೋಲು. ಅಂಕಪಟ್ಟಿಯಲ್ಲಿ ಡಿಸಿ 2ನೇ ಸ್ಥಾನ ಭದ್ರಪಡಿಸಿಕೊಂಡರೆ, ಬೆಂಗಳೂರು 3ನೇ ಸ್ಥಾನದಲ್ಲೇ ಮುಂದುವರೆದಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್​ ಗುಂಪು ಹಂತದ 24ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು. ಆರಂಭಿಕ 5 ಓವರ್​ಗಳಲ್ಲಿ ಮತ್ತು ಕೊನೆಯ 2 ಓವರ್​ಗಳಲ್ಲಿ ರನ್ ಹರಿದು ಬಂದಿತ್ತು. ಆದರೆ ಉಳಿದ ಓವರ್​ಗಳಲ್ಲಿ ರನ್ ಗಳಿಸಲು ಬ್ಯಾಟರ್​ಗಳು ಪರದಾಟ ನಡೆಸಿದರು. ಕುಲ್ದೀಪ್ ಯಾದವ್ ಮತ್ತು ವಿಪ್ರಜ್ ನಿಗಮ್ ಮಧ್ಯಮ ಓವರ್​ಗಳಲ...