ಭಾರತ, ಏಪ್ರಿಲ್ 17 -- ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬುಧವಾರ (ಏಪ್ರಿಲ್ 16) ನಡೆದ 2025 ರ ಐಪಿಎಲ್ 32ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸೂಪರ್​ ಓವರ್​​ನಲ್ಲಿ ಸೂಪರ್ ಡೂಪರ್ ಗೆಲುವು ಸಾಧಿಸಿತು. 20ನೇ ಓವರ್ (8 ರನ್)​ ಮತ್ತು ಸೂಪರ್ ಓವರ್​​ನಲ್ಲಿ (11 ರನ್) ಮಿಚೆಲ್ ಸ್ಟಾರ್ಕ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನದಿಂದಾಗಿ ಆರ್​ಆರ್​ ಸೋಲನುಭವಿಸಿತು. ಆದರೆ, ಸೂಪರ್ ಓವರ್​​ ಬ್ಯಾಟಿಂಗ್​ಗೆ ರಾಜಸ್ಥಾನ್ ಕೈಗೊಂಡ ತಂತ್ರಗಳ ಕುರಿತು ಟೀಕೆ ವ್ಯಕ್ತವಾಗಿದೆ. ತಂಡದ ಸೋಲಿಗೆ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ಸಂಜು ಸ್ಯಾಮ್ಸನ್​ ಗೇಮ್​ ಪ್ಲಾನ್​ಗಳೇ ಕಾರಣ ಎಂದು ಮಾಜಿ ಕ್ರಿಕೆಟಿಗರು ಕಿಡಿಕಾರಿದ್ದಾರೆ.

20ನೇ ಓವರ್​ನಲ್ಲಿ ರಾಜಸ್ಥಾನ್ ಗೆಲ್ಲಲು 9 ರನ್ ಬೇಕಿತ್ತು. ಆದರೆ, ಆಗ ಕ್ರೀಸ್​ನಲ್ಲಿ ಇದ್ದದ್ದು ಧ್ರುವ್ ಜುರೆಲ್ ಮತ್ತು ಶಿಮ್ರಾನ್ ಹೆಟ್ಮೆಯರ್​. ಈ ಇಬ್ಬರು ಸೇರಿ ಗಳಿಸಿದ್ದು 8 ರನ್ ಮಾತ್ರ. ಪರಿಣಾಮ ಸೂಪರ್ ಓವರ್ ಆಯಿತು. ಬಳಿಕ ಈ ಓವರ್​ನಲ್ಲಿ ರಿಯಾನ್ ಪರಾಗ...