ಭಾರತ, ಜನವರಿ 31 -- Economic Survey 2025: ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಜನವರಿ 31 ರ ಶುಕ್ರವಾರ ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷೆ ಯನ್ನು ಮಂಡಿಸಿದರು. ಸಮೀಕ್ಷೆಯ ಪ್ರಕಾರ, ಜಾಗತಿಕ ಮಟ್ಟದಲ್ಲಿ ಅರ್ಥ ವ್ಯವಸ್ಥೆಯ ಅಸ್ಥಿರತೆಯ ನಡುವೆಯೂ, ಮುಂಬರುವ ವರ್ಷದ (2025-26) ಭಾರತದ ಜಿಡಿಪಿ ಬೆಳವಣಿಗೆ ಶೇಕಡ 6.3 ರಿಂದ ಶೇಕಡ 6.8 ಇರಲಿದೆ ಎಂದು ಆರ್ಥಿಕ ಸಮೀಕ್ಷೆ ವಿವರಿಸಿದೆ. ಬಳಕೆದಾರರ ಚಟುವಟಿಕೆ ತಣ್ಣಗಿದ್ದು, ಹಣದುಬ್ಬರ ನಿಯಂತ್ರಣದಲ್ಲಿ ಇರಲಿದೆ. ಗ್ರಾಮೀಣ ಪ್ರದೇಶದ ಬೇಡಿಕೆಯು ದೇಶದ ಅರ್ಥ ವ್ಯವಸ್ಥೆಗೆ ಚಾಲನಾ ಶಕ್ತಿಯಾಗಿ ಇರಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ.

ಆರ್ಥಿಕ ಸಮೀಕ್ಷೆ ಎಂಬುದು ಭಾರತದ ಆರ್ಥಿಕತೆಯ ಕಾರ್ಯಕ್ಷಮತೆ, ಸರ್ಕಾರದ ನೀತಿಗಳು ಮತ್ತು ಮುಂಬರುವ ಹಣಕಾಸು ವರ್ಷದ ದೃಷ್ಟಿಕೋನದ ಸಂಕಲನವಾಗಿದೆ. ಇದನ್ನು ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ನೇತೃತ್ವದ ಆರ್ಥಿಕ ವ್ಯವಹಾರಗಳ ಇಲಾಖೆಯ ಆರ್ಥಿಕ ವಿಭಾಗವು ಈ ಸಮೀಕ್ಷೆಯನ್ನು ಸಿದ್ಧಪಡಿಸಿದೆ. ಸದ್ಯ ವಿ. ಅನಂತ ನಾಗೇಶ್ವರನ್ ಅವರು ಭಾರತ ಸರ್ಕಾ...