Hyderabad, ಏಪ್ರಿಲ್ 7 -- ರಕ್ತದಾನವು ಒಬ್ಬ ವ್ಯಕ್ತಿಯು ಮಾಡಬಹುದಾದ ಅತ್ಯಂತ ನಿಸ್ವಾರ್ಥ ಕಾರ್ಯಗಳಲ್ಲಿ ಒಂದು. ಶ್ರೇಷ್ಠ ದಾನಗಳಲ್ಲಿ ಇದೂ ಒಂದು. ಆರೋಗ್ಯವಂತ ವ್ಯಕ್ತಿಯು ರಕ್ತದಾನ ಮಾಡಬೇಕು. ಇದು ಆತನ ಆರೋಗ್ಯವನ್ನು ಮತ್ತಷ್ಟು ವೃದ್ಧಿಸುತ್ತದೆ. ಮತ್ತೊಂದು ಜೀವ ಉಳಿಸುವ ಮತ್ತು ಮತ್ತೊಂದು ಕುಟುಂಬಕ್ಕೆ ಆಸರೆಯಾಗಿ ನಿಲ್ಲುತ್ತದೆ. ಹಾಗಿದ್ದರೆ ಆರೋಗ್ಯವಂತ ವ್ಯಕ್ತಿಯು ಎಷ್ಟು ಬಾರಿ ರಕ್ತದಾನ ಮಾಡಬಹುದು? ಇಲ್ಲಿದೆ ವಿವರ.

ರಕ್ತದಾನದ ಕುರಿತು ಅನೇಕ ಜನರಲ್ಲಿ ಅನೇಕ ಅನುಮಾನಗಳಿವೆ. ರಕ್ತದಾನದಿಂದ ದೇಹದ ಆರೋಗ್ಯದ ಪರಿಣಾಮ ಬೀರಲಿದೆ ಎಂದು ಸಾಕಷ್ಟು ಮಂದಿ ಭಾವಿಸಿದ್ದುಂಟು. ಈ ತಪ್ಪು ಕಲ್ಪನೆ ಹರಡಿದ್ದರ ಪರಿಣಾಮ ಅದೆಷ್ಟೋ ಮಂದಿ ರಕ್ತದಾನಕ್ಕೆ ಹಿಂದೇಟು ಹಾಕುತ್ತಿದ್ದಾರೆ. ರಕ್ತಹೀನತೆಯ ಸಮಸ್ಯೆಗೆ ಗುರಿಯಾಗಬಹುದು ಎಂದು ಭಾವಿಸುತ್ತಿದ್ದಾರೆ. ವಾಸ್ತವಾಂಶ ಏನೆಂದರೆ ರಕ್ತದಾನ ಮಾಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ರಕ್ತ ಸಂಗ್ರಹಿಸುವ ಮೊದಲು ನಿಮ್ಮ ದೇಹದಲ್ಲಿ ಸಾಕಷ್ಟು ಇದೆಯೇ? ನೀವು ಎಷ್ಟು ಕೆಜಿ ತೂಕ ಇದ್ದೀರಿ ಎಂದು...