Bengaluru, ಏಪ್ರಿಲ್ 5 -- ಬೇಸಿಗೆಯಲ್ಲಿ ಹೆಚ್ಚಿನ ಜನರು ತಣ್ಣೀರು ಕುಡಿಯಲು ಇಷ್ಟಪಡುತ್ತಾರೆ. ಫ್ರಿಜ್‍ನಲ್ಲಿ ನೀರಿಟ್ಟು ಕುಡಿಯುತ್ತಾರೆ. ಬಿಸಿಲಿಗೆ ಹೊರಗೆ ಹೋಗಿ ಬಂದು ಕುಡಿಯುವುದರಿಂದ ಹೊಟ್ಟೆ ತಂಪಾಗುತ್ತದೆ. ಆದರೆ, ಫ್ರಿಜ್ ನೀರು ಆರೋಗ್ಯಕ್ಕೆ ತುಂಬಾನೇ ಹಾನಿಕಾರಕವಾಗಿದೆ. ಬಿಸಿಲಿಗೆ ಹೊರಗೆ ಹೋಗಿ ಬಂದ ಕೂಡಲೇ ಫ್ರಿಜ್‍ನಿಂದ ತಣ್ಣೀರು ಕುಡಿಯುವುದರಿಂದ ಗಂಟಲು ಸಮಸ್ಯೆ ಉಂಟಾಗಬಹುದು. ಹೀಗಾಗಿ ಇದರ ಬದಲು ಮಡಿಕೆ ನೀರು ಕುಡಿಯುವುದು ಉತ್ತಮ. ಮಣ್ಣಿನ ಮಡಿಕೆ, ನೀರನ್ನು ನೈಸರ್ಗಿಕವಾಗಿ ತಂಪಾಗಿಡಲು ಸಹಾಯ ಮಾಡುತ್ತದೆ. ಹೀಗಾಗಿ ಇಂದು ಬಹುತೇಕ ಮಂದಿ ಮಣ್ಣಿನ ಮಡಿಕೆ ಖರೀದಿಸಲು ಮುಂದಾಗುತ್ತಿದ್ದಾರೆ.

ಆದರೆ, ಅನೇಕ ಬಾರಿ ಜನರು ತಪ್ಪು ಮಡಿಕೆಯನ್ನು ಖರೀದಿಸುತ್ತಾರೆ. ಅದು ಬೇಗನೆ ಒಡೆಯುತ್ತದೆ ಅಥವಾ ನೀರು ತಣ್ಣಗಾಗುವುದಿಲ್ಲ. ತಪ್ಪು ಮಡಿಕೆ ಖರೀದಿಸುವುದೇ ಇದಕ್ಕೆ ಕಾರಣ. ಹೀಗಾಗಿ ಮಣ್ಣಿನ ಮಡಿಕೆಯನ್ನು ಖರೀದಿಸಲು ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ. ಈ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

ಬಣ್ಣಕ್ಕೆ ಗಮನ ಕೊಡಿ: ಮಣ್ಣಿ...