ಭಾರತ, ಫೆಬ್ರವರಿ 7 -- ಮುಂಡಗೋಡ: ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕು ಚಿಗಳ್ಳಿ ಗ್ರಾಮದ ಶ್ರೀ ದೀಪನಾಥೇಶ್ವರ ದೇವಸ್ಥಾನದಲ್ಲಿ ದಶಕಗಳಿಂದ ಹೊತ್ತಿ ಉರಿಯುತ್ತಿದ್ದ ಮೂರು ದೀಪಗಳು ಬುಧವಾರ (ಫೆ 5) ಆರಿ ಹೋದವು. ಸರಿ ಸುಮಾರು 4 ದಶಕಕ್ಕೂ ಹೆಚ್ಚು ಕಾಲ ಹೊತ್ತಿ ಉರಿದ ಈ ದೀಪಗಳ ಭಕ್ತರ ಅಚ್ಚರಿಗೆ ಕಾರಣವಾಗಿದ್ದವು. ಈಗ ದೀಪಗಳು ಆರಿ ಹೋಗಿರುವುದು ಭಕ್ತರ ಆತಂಕಕ್ಕೆ ಕಾರಣವಾಗಿದೆ. ಎಣ್ಣೆ ಮತ್ತು ಬತ್ತಿ ಇಲ್ಲದೇ ಉರಿಯುತ್ತಿರುವ ದೀಪಗಳು ಎಂದು ಸುದ್ದಿ ಹರಡಿದ್ದ ಕಾರಣ ಈ ದೀಪಗಳ ದರ್ಶನಕ್ಕಾಗಿ ಸಾಕಷ್ಟು ಪ್ರವಾಸಿಗರು ನಿತ್ಯವೂ ದೀಪನಾಥೇಶ್ವರ ದೇವಸ್ಥಾನಕ್ಕೆ ಆಗಮಿಸುತ್ತಿದ್ದರು.

ಸರಿ ಸುಮಾರು ನಾಲ್ಕೂವರೆ ದಶಕ ಕಾಲದಿಂದ ಹೊತ್ತಿ ಉರಿದು ಗ್ರಾಮಸ್ಥರಲ್ಲದೆ, ದೇಶ ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಿದ ಚಿಗಳ್ಳಿ ದೀಪನಾಥೇಶ್ವರ ದೇವಸ್ಥಾನದ ಮೂರು ದೀಪಗಳು ಆರಿ ಹೋದವು ಎಂಬ ಸುದ್ದಿ ಬುಧವಾರ (ಫೆ 5) ಕಾಡ್ಗಿಚ್ಚಿನಂತೆ ಹರಡಿತು. ವಿಷಯ ತಿಳಿದ ಕೂಡಲೆ ಗ್ರಾಮಸ್ಥರು ತಂಡೋಪತಂಡವಾಗಿ ದೇವಸ್ಥಾನಕ್ಕೆ ಬಂದರು. ಅಕ್ಕಪಕ್ಕದ ಗ್ರಾಮದ ಜನರ...