Bengaluru, ಮಾರ್ಚ್ 14 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಗುರುವಾರ ಮಾರ್ಚ್ 13ರ ಸಂಚಿಕೆಯಲ್ಲಿ ಲಕ್ಷ್ಮೀ ನಿವಾಸದಿಂದ ಕೊನೆಗೂ ಜಾಹ್ನವಿಯನ್ನು ಜಯಂತ್ ಮನೆಗೆ ಕರೆದುಕೊಂಡು ಬಂದಿದ್ದಾನೆ. ಜಾಹ್ನವಿ ಅಲ್ಲಿಂದ ಬರುವುದಿಲ್ಲ ಎಂದು ಕೇಳಿಕೊಂಡರೂ, ಜಯಂತ್ ಕೇಳಿಲ್ಲ, ಬದಲಾಗಿ ಅತ್ತೆ ಮಾವನ ಬಳಿ, ಜಾಹ್ನವಿ ಜೊತೆಗಿಲ್ಲದಿದ್ದರೆ, ನನಗೆ ಊಟವೇ ಸೇರುವುದಿಲ್ಲ, ಕೈಕಾಲು ಕೂಡ ಆಡುವುದಿಲ್ಲ, ಅಷ್ಟೊಂದು ಅವಲಂಬಿತನಾಗಿದ್ದಾನೆ ಎಂದು ಹೇಳುತ್ತಾನೆ. ಹೀಗಾಗಿ ಅವನ ಮಾತು ಕೇಳಿದ ಜಾನು ಅಪ್ಪ ಅಮ್ಮ ಅವಳನ್ನು ಜಯಂತ್ ಜತೆ ಹೋಗುವಂತೆ ಸೂಚಿಸುತ್ತಾರೆ, ಕೊನೆಗೆ ವಿಧಿಯಿಲ್ಲದೇ ಜಾಹ್ನವಿ ಜಯಂತ್ ಜತೆ ಮನೆಗೆ ಹೋಗುತ್ತಾಳೆ.

ಇತ್ತ ಮನೆಯಿಂದ ಹೊರಗೆ ಅಟೋದಲ್ಲಿ ದುಡಿಯಲು ಹೊರಟ ಶ್ರೀನಿವಾಸ್, ರಸ್ತೆಯ ಮಧ್ಯದಲ್ಲಿ ಅಟೋ ಒಮ್ಮೆಲೆ ನಿಂತುಬಿಟ್ಟಿದೆ. ಕೊನೆಗೆ ಪರಿಶೀಲಿಸಿದಾಗ, ಇಂಜಿನ್ ಕೈಕೊಟ್ಟಿರುವುದು ನೆನಪಾಗಿದೆ. ಅಟೋದ ಮೂಲಕವೇ ಜೀವನ ಸಾಗಿಸುತ್ತಿದ್ದ ಶ್ರೀನಿವಾಸ್‌ಗೆ, ಈಗ ಜೀವನಾಧಾರವೇ ಕೈಕೊಟ್ಟಿರುವುದು ಒಮ್ಮೆಲೆ ಅವರ...