ಭಾರತ, ಮೇ 30 -- ಬೆಂಗಳೂರು: ಈ ತಿಂಗಳಲ್ಲಿ ನಗರದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಬೀಳುವ ಮರಗಳು ಮತ್ತು ಕೊಂಬೆಗಳನ್ನು ಕತ್ತರಿಸುವಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 24/7 ಟೋಲ್‌ ಫ್ರೀ ಹೆಲ್ಪ್‌ ಲೈನ್‌ ನಂಬರ್‌ ಸ್ಥಾಪಿಸಲಾಗಿದ್ದು 1533 ನಂಬರ್‌ಗೆ ಪ್ರತಿದಿನ 20-25 ಕರೆಗಳು ಬರುತ್ತಿವೆ. ಈ ತಿಂಗಳಲ್ಲಿ ಬೀಳುವ ಹಂತದಲ್ಲಿದ್ದ 500 ಮರಗಳು ಮತ್ತು 1,000 ಮರದ ಕೊಂಬೆಗಳನ್ನು ಕತ್ತರಿಸಲಾಗಿದೆ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ಬಿ ಎಲ್‌ ಜಿ ಸ್ವಾಮಿ ಹೇಳಿದ್ದಾರೆ. ಒಮ್ಮೊಮ್ಮೆ ಮರಗಳನ್ನು ಕತ್ತರಿಸಲು ಮಳೆಯೂ ಅಡ್ಡಿಯಾಗಿದೆ ಎಂದು ಅವರು ಹೇಳಿದ್ದಾರೆ.

ಸಾರ್ವಜನಿಕರ ಕರೆಗಳ ಆಧಾರದಲ್ಲಿ ಏಪ್ರಿಲ್‌ ನಲ್ಲಿ ಅಪಾಯದಲ್ಲಿದ್ದು 80 ಹಳೆಯ ಮರಗಳು ಮತ್ತು 175 ಕೊಂಬೆಗಳನ್ನು ಕತ್ತರಿಸಲಾಗಿದೆ ಬಹುತೇಕ ಕರೆಗಳು ದಕ್ಷಿಣ, ಪೂರ್ವ ಮತ್ತು ಪಶ್ಚಿಮ ವಲಯದಿಂದ ಬಂದಿವೆ. ರಸ್ತೆ ಅಥವಾ ಪೈಪ್‌ ಗಳನ್ನು ಅಳವಡಿಸುವ ಕಾಮಗಾರಿ ನಡೆಯುತ್ತಿರುವದರಿಂದ 5-6 ವರ್ಷಗಳ ಮರಗಳೂ ಅಪಾಯ ಎದುರಿಸುತ್ತಿವೆ ಎಂದು ಪಾ...