ಭಾರತ, ಏಪ್ರಿಲ್ 18 -- ಓದೆಲಾ 2 ಚಿತ್ರ ವಿಮರ್ಶೆ: ತಮನ್ನಾ ಭಾಟಿಯಾ ಹಾಗೂ ಕನ್ನಡ ನಟ ವಸಿಷ್ಠ ಸಿಂಹ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಒದೆಲಾ 2' ಚಿತ್ರ ಟೀಸರ್ ಹಾಗೂ ಟ್ರೈಲರ್ ಮೂಲಕ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. 2022ರಲ್ಲಿ ಬಿಡುಗಡೆಯಾದ 'ಓದೆಲಾ ರೈಲ್ವೆ ಸ್ಟೇಷನ್' ಚಿತ್ರದ ಮುಂದುವರಿದ ಭಾಗವಿದು. ತಮನ್ನಾ ಫಸ್ಟ್‌ ಲುಕ್ ಕೂಡ ಚಿತ್ರದ ಮೇಲೆ ಭರವಸೆ ಹುಟ್ಟಿಸಿತ್ತು. ಆದರೆ ಈ ಚಿತ್ರ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸೋತಿದೆ. ಮೊದಲಾರ್ಧದಲ್ಲಿ ಕೌತುಕಗಳಿದ್ದರೂ, ದ್ವಿತಿಯಾರ್ಧ ಮಂಕಾಗಿದ್ದು ಸಿನಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಚಿತ್ರ ಸೋತಿದೆ.

ರಾಧಾ (ಹೆಬಾ ಪಾಟೇಲ್‌) ತನ್ನ ಗಂಡನನ್ನು ಕೊಂದು ನಂತರ ಜೈಲಿಗೆ ಹೋಗುವುದರೊಂದಿಗೆ ಸಿನಿಮಾ ಪ್ರಾರಂಭವಾಗುತ್ತದೆ. ಅವನ ದೌರ್ಜನ್ಯದಿಂದ ಬೇಸತ್ತ ಗ್ರಾಮಸ್ಥರು ಅವನಿಗೆ ಸರಿಯಾದ ಅಂತ್ಯಕ್ರಿಯೆಯನ್ನು ಮಾಡಿರುವುದಿಲ್ಲ. ಅವನನ್ನು ಕ್ರೂರವಾಗಿ ಸುಟ್ಟು ಹಾಕುತ್ತಾರೆ. ಆದರೆ ಇದು ಆ ಗ್ರಾಮಸ್ಥರಿಗೆ ಶಾಪವಾಗುತ್ತದೆ. ಬಂಧ ಮುಕ್ತಗೊಳ್ಳುವ ತಿರುಪತಿಯ ಆತ್ಮವು ಓದೆಲಾ ಗ್ರಾಮದ ಒಬ...